ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಶ್ರೀ ಡಿ ದೇವರಾಜ್ ಅರಸ್ ಕ್ರೀಡಾಂಗಣ ಗುಂಡ್ಲುಪೇಟೆಯಲ್ಲಿ 2026-27 ನೆಯ ಸಾಲಿನ ಮೈಸೂರ್ ವಿಭಾಗ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ
17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ಪಂದ್ಯಾಟ ಅ. 15 ರಿಂದ 17 ರವರೆಗೆ ನಡೆದಿದ್ದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಕ್ಸಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಪುತ್ತೂರಿನ ವಿವೇಕಾನಂದ ಶಾಲೆಯ ಅನ್ವಿಕ ರಾಜ್,ಸಾನ್ವಿ ಉಪ್ಪಿನಂಗಡಿ ಸೈಂಟ್ ಮೇರಿಸ್ ಶಾಲೆಯ ಗ್ರೀಷ್ಮ ಮತ್ತು ಸುಬ್ರಮಣ್ಯದ ಕುಮಾರಸ್ವಾಮಿ ಶಾಲಾ ವಿದ್ಯಾರ್ಥಿ ಸೃಷ್ಟಿ, ಅಮೃತ ಫೈನಲ್ ಪಂದ್ಯಾಟದಲ್ಲಿ ಮೈಸೂರ ತಂಡದ ವಿರುದ್ಧ ಹೋರಾಡಿ ದ್ವಿತೀಯ ಸ್ಟಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನ್ವಿಕ ರಾಜ್ ಮತ್ತು ಕುಮಾರಸ್ವಾಮಿ ವಿದ್ಯಾಲಯದ ಸುಬ್ರಮಣ್ಯದ ವಿದ್ಯಾರ್ಥಿನಿ ಸೃಷ್ಟಿ ಬಿದರ್ ನಲ್ಲಿ ನಡೆಯುವ ಸಾರ್ವಜನಿಕ ಶಿಕ್ಸಣ ಇಲಾಖೆಯ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ