ಗಣೇಶ್ ಸುಬ್ರಹ್ಮಣ್ಯರಿಗೆ ವೈಟ್ ಲಿಪ್ಟಿಂಗ್ ನಲ್ಲಿ ಪ್ರಥಮ ಬಹುಮಾನ

0

ಸುಬ್ರಹ್ಮಣ್ಯ ದ ರವಿ ಕಕ್ಕೆಪದವು ಮತ್ತು ಶ್ರೀಮತಿ ಗೀತಾ ದಂಪತಿಗಳ ಪುತ್ರ ಗಣೇಶ್ ಸುಬ್ರಹ್ಮಣ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ವೈಟ್ ಲಿಪ್ಟಿಂಗ್ ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿಯಾಗಿರುವ ಇವರು ಅ.18 ರಂದು ಮೂಡಬಿದಿರೆಯ ದವಳಾ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಮುಂದೆ ಇವರು ದಕ್ಷಿಣ ವಲಯ ವಿಶ್ವವಿದ್ಯಾಲಯ ದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ