ಸುಳ್ಯಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಆಯುಧಪೂಜೆ

0

ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಪುರೋಹಿತ ರವಿ ನಾರಾಯಣ
ಪೌರೋಹಿತ್ಯದಲ್ಲಿ ಆಯುಧಪೂಜೆ ಅ.20 ರಂದು ನಡೆಯಿತು.

ಇಲಾಖೆಯ ಮತ್ತು ಸಿಬ್ಬಂದಿಗಳ ಎಲ್ಲಾ ವಾಹನಗಳಿಗೆ ,ಠಾಣಾ ಆಯುಧಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಸುಳ್ಯ ಪೊಲೀಸ್ ಠಾಣೆ ಉಪ ನಿರೀಕ್ಷಕರಾದ ಉದಯ ರವಿ, ಬೆಳ್ಳಾರೆ ಪೊಲೀಸ್ ಠಾಣೆ ಉಪನೀರಿಕ್ಷಕರಾದ ಈರಯ್ಯ ದೂಂತೂರು,ಎಎಸೈ ವಿಶ್ವನಾಥ ನಾಯ್ಕ, ಎಎಸೈ ತಾರನಾಥ್ ಸರ್ಕಲ್ ಕಛೇರಿ ಸಿಬ್ಬಂದಿಗಳಾದ ರಾಮನಾಯ್ಕ,ಹನುಮಂತ, ಸೋಮಯ್ಯ ಹಿರೆಮಠ ಹಾಗೂ ಸುಳ್ಯ ಮತ್ತು ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಹುಲಿವೇಷ ಕುಣಿತ ಏರ್ಪಡಿಸಲಾಗಿತ್ತು.