ಬೆಳೆಯಬೇಕೆಂಬ ತುಡಿತವೇ ಕಲಿಕೆಗೆ ಪ್ರೇರಣೆ- ಡಾ. ದಾಮ್ಲೆ
“ವಿದ್ಯಾರ್ಥಿಗಳಲ್ಲಿ ತಾನು ಬೆಳೆಯಬೇಕೆಂಬ ಪ್ರೇರಣೆ ಮೂಡಬೇಕು. ಅಂತಹ ಪ್ರೇರಣೆ ಇದ್ದಾಗ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಕಷ್ಟಗಳನ್ನು ಮೀರಿ ಅವರು ಕಲಿಯುತ್ತಾರೆ. ಶಾಲೆಯಿಂದ ದೂರದ ಗುಡಿಸಲಿನಲ್ಲಿ ಚಿಮಣಿ ದೀಪದ ಬೆಳಕಿನಲ್ಲಿ ಓದಿ ಡಿಸ್ಟಿಂಕ್ಷನ್ ಅಂಕಗಳನ್ನು ಗಳಿಸಿದ ಮಕ್ಕಳ ಉದಾಹರಣೆಗಳಿವೆ. ಆದರೆ ಸಾಕಷ್ಟು ಸೌಲಭ್ಯಗಳ ನಡುವೆಯೂ ಮಕ್ಕಳಲ್ಲಿ ಓದುವ ಆಸಕ್ತಿ ಇಲ್ಲದಿರುವುದು ಪೋಷಕರಿಗೆ ತಲೆನೋವಾಗಿದೆ ಎಂದು ಅವರು ಹೇಳಿದರು.















ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪೋಷಕರ ಸಭೆಯನ್ನು ಉದ್ದೇಶಿಸಿ ಅ.20 ರಂದು ಮಾತನಾಡಿದರು.
ಪ್ರಕೃತಿಯಲ್ಲಿ ಪ್ರತಿಕೂಲ ಸ್ಥಿತಿಯಲ್ಲಿ ಗಿಡಗಳು ಪ್ರಪುಲ್ಲಿತವಾಗಿಬೆಳೆಯುವ ಉದಾಹರಣೆಗಳಿವೆ. ಅವುಗಳನ್ನು ನೋಡಿ ಮಕ್ಕಳು ಪ್ರೇರಣೆ ಪಡೆಯಬೇಕು. ಶಾಲೆಯ ಸೂರ್ಯಾಲಯದಲ್ಲಿ ಕಲ್ಲುಗಳ ಎಡೆಯಲ್ಲಿ ಸುಪುಷ್ಟವಾಗಿ ತಾನಾಗಿ ಬೆಳೆದ ಗಿಡವನ್ನು ತೋರಿಸಿ ಬೆಳೆಯುವ ಹಂಬಲದ ಯಶಸ್ಸಿಗೆಉದಾಹರಣೆಯನ್ನು ನೀಡಿದರು. ಪರೀಕ್ಷೆಯಲ್ಲಿ ಗಳಿಸುವ ಅಂಕಗಳಷ್ಟೇ ಮಕ್ಕಳ ವ್ಯಕ್ತಿತ್ವಕ್ಕೆ ಮಾಪಕಗಳಲ್ಲ. ಸದ್ಗುಣಗಳುಮೈಗೂಡುವುದುಮುಖ್ಯ.ಆದಿಸೆಯಲ್ಲಿಯೂ ಶಾಲೆಗಳ ಪ್ರಭಾವ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳ ಪ್ರಗತಿಗೆ ಸಂಬಂಧಿಸಿ ಪೋಷಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಈ ಸಭೆಯಲ್ಲಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಮುಖ್ಯ ಶಿಕ್ಷಕ ದೇವಿಪ್ರಸಾದ್ ಜಿ. ಸಿ. ಶಿಕ್ಷಕವೃಂದ, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







