🔶ಇಂದು ಅಪರಾಹ್ನ ಸಾಂಸ್ಕೃತಿಕ ಸಂಭ್ರಮ,ಸಂಜೆ ವೈಭವದ ಶೋಭಾಯಾತ್ರೆ-ಜಲಸ್ತಂಭನ

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ.) ಪಂಜ, ಶ್ರೀ ಶಾರದೋತ್ಸವ ಸಮಿತಿ-2026 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡಹಬ್ಬ17ನೇ ವರ್ಷದ ಶ್ರೀ ಶಾರದೋತ್ಸವವು ಅ. 21 ರಂದು ಸಂಜೆ ತನಕ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಲಿದೆ. ಆ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು.
ಸಾಂಸ್ಕೃತಿಕ ಸ್ಪರ್ಧೆಯನ್ನು ಪಂಜ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ ಉದ್ಘಾಟಿಸಿ ಮಾತನಾಡಿ
” ನಮ್ಮ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಕಾರ್ಯಕ್ರಮವಿದು. ಇಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಕಾಣಲು ಕಾರಣವಾಗುತ್ತದೆ. ಶ್ರೀ ಶಾರದಾ ದೇವಿಯ ಆರಾಧನೆಯಿಂದ ವಿಶೇಷ ಅನುಗ್ರಹ ಎಲ್ಲರಿಗೂ ದೊರೆಯುತ್ತದೆ.” ಎಂದು ಅವರು ಹೇಳಿದರು.
ಕ್ರೀಡಾ ಸ್ಪರ್ಧೆಯನ್ನು ಬೆಂಗಳೂರಿನ ಉದ್ಯಮಿ ದಿವಾಕರ ಬರ್ಲಾಯಬೆಟ್ಟು ಉದ್ಘಾಟಿಸಿ ಶುಭ ಹಾರೈಸಿದರು.















ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಧರ್ಮಪಾಲ ಮರಕ್ಕಡ ಸಭಾಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ವಲಯ
ಮೇಲ್ವಿಚಾರಕಿ ಶ್ರೀಮತಿ ಮಮತಾ ,
ಶ್ರೀ ಶಾರದೋತ್ಸವ ಸಮಿತಿಯ ಗೌರವಧ್ಯಕ್ಷ ಮಾಧವ ಗೌಡ ಜಾಕೆ,
ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಶ್ರೀಶಾರದೋತ್ಸವ ಸಮಿತಿ ಕಾರ್ಯದರ್ಶಿ ಉಜ್ವಲ್ ಚಿದ್ಗಲ್ಲು, ಜತೆ ಕಾರ್ಯದರ್ಶಿ ಸುದರ್ಶನ ಪಟ್ಟಾಜೆ,ಕ್ರೀಡಾ ಸಂಚಾಲಕರಾದ ಯೋಗೀಶ್ ಚಿದ್ಗಲ್ಲು, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕರಾದ ಸತೀಶ್ ಪಂಜ, ಸಾಂಸ್ಕೃತಿಕ ಸ್ಪರ್ಧೆ ಸಂಚಾಲಕರಾದ ರಮ್ಯಾ ದಿಲೀಪ್ ಬಾಬ್ಲುಬೆಟ್ಟು,
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾರದೋತ್ಸವ ಸಮಿತಿ ಕೋಶಾಧ್ಯಕ್ಷರಾದ ಶ್ರೀಮತಿ ನಳಿನಿ ಮಂಚಿಕಟ್ಟೆ ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು. ಶ್ಯಾಮ ಕೃಷ್ಣನಗರ ಪ್ರಾರ್ಥಿಸಿದರು. ಸುದರ್ಶನ ಪಟ್ಟಾಜೆ ವಂದಿಸಿದರು.
ಪೂರ್ವಾಹ್ನ ಪ್ರತಿಷ್ಠೆ, ಭಜನಾ ಸಂಕೀರ್ತನೆ
ಧಾರ್ಮಿಕ ಸಂಸ್ಕಾರ ಶಿಕ್ಷಣ ಪಂಜದ ಮಕ್ಕಳಿಂದ ಧಾರ್ಮಿಕ ಪಠಣ (ಸಂಸ್ಕಾರ ದೀಪಿಕಾ) , ಮಕ್ಕಳಿಗೆ ಅಕ್ಷರ ಅಭ್ಯಾಸ ನಡೆಯಿತು.ಮಧ್ಯಾಹ್ನ ಧಾರ್ಮಿಕ ಸಭೆ,ಮಹಾಪೂಜೆ,
ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.

ಸಾಂಸ್ಕೃತಿಕ ಸಂಭ್ರಮ :
ಅ.ಗಂ.1 ರಿಂದ ವಿಶ್ವ ಕಲಾನಿಕೇತನ ಕಲ್ಬರಲ್ ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿದುಷಿ ನಯನ ವಿ. ರೈ, ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ).ಮ. ಗಂ2 ರಿಂದ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ 3.ಕಲಾ ಮಂದಿರ್ ಡ್ಯಾನ್ಸ್ ಕ್ರಿವ್ ಇದರ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ: ಪ್ರಮೋದ್ ರೈ ಬೆಳ್ಳಾರೆ. ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ಶೋಭಾಯಾತ್ರೆ-ಜಲಸ್ತಂಭನ
ಸಂಜೆ 4.30ರಿಂದ ಶಾರದಾಮಾತೆಯ ವೈಭವದ ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ.ಕುಣಿತ ಭಜನೆ, ಹುಲಿವೇಷ, ನಾಸಿಕ್ ಬ್ಯಾಂಡ್ ಪ್ರದರ್ಶನ
ವಿಶೇಷ ಆಕರ್ಷಣೆಯಾಗಲಿದೆ.







