ಎಡಮಂಗಲ : ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

0

ಎಡಮಂಗಲ ಶ್ರೀ ಪಂಚಾಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಅಕ್ಟೋಬರ್ ೧೧ ನೇ ಆದಿತ್ಯವಾರ ಪ್ರಾರಂಭಗೊಂಡು ಅ.೨೧ ರ ವರೆಗೆ ನವರಾತ್ರಿ ಉತ್ಸವ ನಡೆಯಿತು.
ಪ್ರತಿ ದಿನ ಸಂಜೆ ಭಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಸಂಜೆ ದೇವತಾ ಪ್ರಾರ್ಥನೆ, ದುರ್ಗಾ ಪೂಜೆ, ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ಭೋಜನ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು.