ಅ.26ರಂದು ಮಂಡೆಕೋಲು ಗ್ರಾಮಸ್ಥರಿಗೆ ಕ್ರೀಡಾಕೂಟ
ನ.1ರಂದು ತಾಲೂಕಿನ ಸಹಕಾರ ಸಂಘದವರಿಗೆ ಕ್ರೀಡಾಕೂಟ
73 ನೇ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನ.20ರಂದು ಮಂಡೆಕೋಲಿನಲ್ಲಿ ನಡೆಯಲಿದ್ದು ಆ ಪ್ರಯುಕ್ತ ಮಂಡೆಕೋಲು ಗ್ರಾಮದ ಮ್ಯಾರಥಾನ್ ಸ್ಪರ್ಧೆ ಅ.25ರಂದು ಮಂಡೆಕೋಲಿನಲ್ಲಿ ನಡೆಯಲಿದೆ.














ಅ.26ರಂದು ಸೋಮವಾರ ಗ್ರಾಮ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಹಗ್ಗಜ್ಜಾಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ ಮಂಡೆಕೋಲು ಶಾಲಾ ಆಟದ ಮೈದಾನದಲ್ಲಿ ನಡೆಯುವುದು.
ಇದರ ಜತೆಗೆ ಗುಂಡೆಸೆತ, ಲಕ್ಕಿಗೇಮ್ ಸ್ಪರ್ಧೆ, ಹಿರಿಯರಿಗೆ ವೇಗದ ನಡಿಗೆ ನಡೆಯುವುದು. ಹೆಸರು ನೋಂದಾಯಿಸಲು ಅ.25 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮಂಡೆಕೋಲು ಸಹಕಾರ ಸಂಘದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ನ.1ರಂದು ತಾಲೂಕು ಮಟ್ಟದ ಸಹಕಾರಿ ಕ್ರೀಡಾಕೂಟ ಪೇರಾಲು ಹಿ.ಪ್ರಾ.ಶಾಲೆಯಲ್ಲಿ ನಡೆಯುವುದು.
ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ 30 ಗಜಗಳ ಕ್ರಿಕೆಟ್ ಪಂದ್ಯಾಟ (8 ಜನ, ನೇರ ಸಿಕ್ಸ್), ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಗುಂಡೆಸೆತ ಹಾಗೂ ಲಕ್ಕಿಗೇಮ್ (ಮಹಿಳೆಯರಿಗೆ).
ನವೋದಯ ಸ್ವ ಸಹಾಯ ಸಂಘ ಸದಸ್ಯರಿಗೆ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಹಾಗೂ ಗುಂಡೆಸೆತ ನಡೆಯುವುದು. ಹೆಸರು ನೋಂದಾಯಿಸಲು ಅ.25 ಕೊನೆಯ ದಿನ.







