ಮರ್ಕಝ್ ಕನ್ನಡ ಸಂಘದಿಂದ ಲತೀಫ್ ಹರ್ಲಡ್ಕ ರಿಗೆ ಗೌರವರ್ಪಣೆ

0

ಮರ್ಕಝ್ ವಿದ್ಯಾಸಂಸ್ಥೆ ಅಧೀನದಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಕನ್ನಡ ಸಂಘದ ವತಿಯಿಂದ ನಡೆದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲವರ ಕಾರ್ಯಕ್ರಮ ಕ್ಯಾಲಿಕಟ್ ಮರ್ಕಝ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂದಪುರಂ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮರ್ಕಝ್ ಕನ್ನಡ ಸಂಘ ವಿದ್ಯಾರ್ಥಿಗಳಿಗೆ ಸದಾ ಸಹಕಾರ ನೀಡುತ್ತಿರುವ ಉದ್ಯಮಿ ಹರ್ಲ ಫೌಂಡೇಶನ್ ಅಧ್ಯಕ್ಷ ಹಾಜಿ ಅಬ್ದುಲ್‌ ಲತೀಫ್ ಹರ್ಲಡ್ಕ ಗೌರವಿಸಲಾಯಿತು.
ಕನ್ನಡ ಸಂಘ ಎ.ಪಿ ಉಸ್ತಾದರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕನ್ನಡ ಪ್ರಂಬದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಅಜ್ಜಾವರ ಗ್ರಾಮದ ಮೇನಾಲ ಸಾಬಿತ್ ಹಾಗೂ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಕಲಂದರ್ ರಿಝ್ವಿಯವರಿಗೆ ಪ್ರಶಸ್ತಿ ಮತ್ತು ನಗದು ನೀಡಿ ಅಭಿನಂದಿಸಲಾಯಿತು.
ವಿ.ಪಿ ಮಹಮ್ಮದ್ ಪೈಝಿ ವಿಳ್ಯಾಪಲ್ಲಿ,ಡಾ.ಹುಸೈ ಸಖಾಫಿ ಚುಳ್ಳಿಕೊಡ್,ಸಿ ಮಹಮ್ಮದ್ ಪೈಝಿ,ಉಬೈದುಲ್ಲಾ ಸಖಾಫಿ,ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ,ಕೇರಳದಲ್ಲಿ ಉದ್ಯಮಿಯಾಗಿರುವ ಉಮ್ಮರ್ ಕೊಲ್ಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು