













ಅಧ್ಯಕ್ಷ ಹಾಜಿ ಯು.ಎಚ್ ಅಬೂಬಕ್ಕರ್ ಮಂಗಳ
ಉಪಾಧ್ಯಕ್ಷ ಹಾಜಿ ಅಬ್ದುಲ್ ಕಾದರ್ ಬಯಂಭಾಡಿ
ಪ್ರದಾನ ಕಾರ್ಯದರ್ಶಿ ನಾಸಿರ್ ಬಿಝ್
ಕೋಶಾಧಿಕಾರಿ ಹಮೀದ್ ಆಲ್ಫಾ ಆಯ್ಕೆ
ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ಮಹಾಸಭೆಯು ಜಮಾಯತ್ ಕಮಿಟಿ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಮಂಗಳ ರವರ ಅಧ್ಯಕ್ಷತೆಯಲ್ಲಿ ಹಿದಾಯ ಸಭಾಂಗಣದಲ್ಲಿ ನಡೆಯಿತು.
ಮಹಲ್ ಖತೀಬರಾದ ನಸೀಹ್ ದಾರಿಮಿ ಯವರ ದುಆ ನೆರವೇರಿಸಿದರು
ದ.ಕ ಜಿಲ್ಲಾ ವಕ್ಫ್ ಅಧಿಕಾರಿ ಮುಸ್ತಫಾ ಮತ್ತು ಮಾಜಿ ಅಧಿಕಾರಿ ಅಬೂಬಕ್ಕರ್ ಮಹಾಸಭೆ ವೀಕ್ಷಕರಾಗಿ ಭಾಗವಹಿಸಿದರು.
ಸಭೆಯಲ್ಲಿ ನೂತನ ಆಡಳಿತ ಸಮಿತಿ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
2026–2029ನೇ ಸಾಲಿನ ನೂತನ ಆಡಳಿತ ಸಮಿತಿಗೆ ಅಧ್ಯಕ್ಷರಾಗಿ ಯು. ಹೆಚ್. ಅಬೂಬಕ್ಕರ್ ಹಾಜಿ ಮಂಗಳ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಬಿಝ್, ಜೊತೆ ಕಾರ್ಯದರ್ಶಿಗಳಾಗಿ, ಜಲೀಲ್ ತಡಗಜೆ, ಉಸ್ಮಾನ್ ಹಾಜಿ, ಕೋಶಾಧಿಕಾರಿ ಹಮೀದ್ ಆಲ್ಫ, ಆಡಳಿತ ಸಮಿತಿಯ ಸದಸ್ಯರುಗಳಾಗಿ, ಬಶೀರ್ ಕಲ್ಲಪ್ಪಣೆ, ಅಝರುದ್ದೀನ್ ಬೆಳ್ಳಾರೆ, ಹಮೀದ್ ಹೆಚ್. ಎಂ., ಬಶೀರ್ ಕೆ. ಎ., ಹಸೈನಾರ್ ಪೆರುವಾಜೆ, ಹನೀಫ್ ನೆಟ್ಟಾರು, ಸಿದ್ದೀಖ್ ಮಾಲೆಂಗ್ರಿ, ಮಹ್ಮೂದ್ ಬಿ. ಎ. ಮತ್ತು ಅಬ್ದುಲ್ ರಹಿಮಾನ್ ಟಿ. ಯವರನ್ನು ಅವಿರೋಧವಾಗಿ ಆಯ್ಕೆ ಮಾಢಲಾಯಿತು.
ಈ ಸಭೆಯಲ್ಲಿ ಜಮಾಅತಿನ ಹೆಚ್ಚಿನ ಸದಸ್ಯರು ಭಾಗಿಯಾಗಿ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಲು ಸಹಕರಿಸಿದರು ಸಭೆಗೆ ಆಗಮಿಸಿದವರನ್ನು ಬಶೀರ್ ಕಲ್ಲಪಣೆ ಸ್ವಾಗತಿಸಿ ವಂದಿಸಿದರು







