













ಪಾಲ್ತಾಡಿ ಅಂಗಡಿಹಿತ್ಲು ನಿವಾಸಿ, ಬೆಳ್ಳಾರೆ ಕ್ಲಾಸಿಕ್ ಟೈಲರ್ಸ್ನ ಮಾಲೀಕರು ಹಾಗೂ ಕೃಷಿಕರಾದ ಎ.ಆರ್. ಗಂಗಾಧರ ಗೌಡ ಅವರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ವತಿಯಿಂದ ನೀಡಲಾಗುವ ಸೇವಾರತ್ನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಅಕ್ಟೋಬರ್ 23ರಂದು ಶುಕ್ರವಾರ ಸಂಜೆ 4.30ಕ್ಕೆ ಮಂಗಳೂರಿನಲ್ಲಿ ನಡೆಯಲಿದೆ.
ಕ್ಲಾಸಿಕ್ ಟೈಲರ್ಸ್ ಸಂಸ್ಥೆಯ ಮೂಲಕ ಟೈಲರಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಎ.ಆರ್. ಗಂಗಾಧರ ಗೌಡ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಕುಟುಂಬದವರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಸಂತಸ ಮೂಡಿಸಿದೆ.







