













ಬೆಳ್ಳಾರೆ – ನಿಂತಿಕಲ್ ನಡುವಿನ ಅಯ್ಯನಕಟ್ಟೆ ಜಂಕ್ಷನ್ ಬಳಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದು, ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ. 25 ರಂದು ಸಂಜೆ 7.30 ಕ್ಕೆ ನಡೆದಿದೆ. ಬೈಕ್ ಸವಾರ ಪಂಜಿಗಾರಿನ ಸಾಕಿರ್ ಗೆ ಗಾಯಗಳಾಗಿದ್ದು, ಅವರನ್ನು ಘಟನಾ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.







