













ಐವರ್ನಾಡು ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲು ನಿವೇಶನ ಮಂಜೂರು ಮಾಡಬೇಕೆಂದು ಸುಳ್ಯ ತಹಶೀಲ್ದಾರ್ ಮಂಜುಳಾರವರಿಗೆ ಐವರ್ನಾಡಿನ ಗ್ರಾಮಸ್ಥರು ಅ27 ರಂದು ಮನವಿ ನೀಡಿದರು.

ಮನವಿಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಮೆಸ್ಕಾಂ ಶಾಖಾ ವ್ಯಾಪ್ತಿಗೆ ಒಳಪಟ್ಟ ಐವರ್ನಾಡು ಗ್ರಾಮದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಐವರ್ನಾಡು ಗ್ರಾಮದ ಮುಚ್ಚಿನಡ್ಕ ಎಂಬಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ಗುರುತಿಸಿ ನಿವೇಶನ ಮಂಜೂರಾತಿಗಾಗಿ ಗ್ರಾಮ ಪಂಚಾಯತ್ನಿಂದ ನಿರ್ಣಯ ಮಾಡಿ ತಮಗೆ ಮನವಿ ಸಲ್ಲಿಸಲಾಗಿದ್ದು ಆದರೆ ಈ ಬಗ್ಗೆ ತಾವು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ದಯಮಾಡಿ ಈ ಪ್ರಸ್ತಾವನೆಯನ್ನು ಪುನಃ ಪರಿಶೀಲಿಸಿ ಐವರ್ನಾಡು ಗ್ರಾಮದ ಮುಚ್ಚಿನಡ್ಕ ಎಂಬಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ರವರು ಸ್ಥಳ ಪರಿಶೀಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹಿರಿಯರಾದ
ಮಾಧವ ಭಟ್ ಶೃಂಗೇರಿ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ,ಅಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು,ಶ್ರೀಮತಿ ಲೀಲಾವತಿ ಕುತ್ಯಾಡಿ,ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಮಾಜಿ ಸದಸ್ಯರಾದ ರಂಜನ್ ಮೂಲೆತೋಟ,ದೇವಿಪ್ರಸಾದ್ ಕೊಪ್ಪತ್ತಡ್ಕ, ಸಹಕಾರಿ ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಪುರಂದರ ಶಾಂತಿಮೂಲೆ,ಅನಂತ ಖಂಡಿಗೆಮೂಲೆ,ಗೋಪಾಲಕೃಷ್ಣ ಚೆಮ್ನೂರು,ಚಂದ್ರಕಾಂತ ಕೋಡ್ತೀಲು,ವಿನಯ ಕೋಡ್ತೀಲು,ತೀರ್ಥಪ್ರಸಾದ್ ,ಪ್ರಮೋದ್ ಪಾಲೆಪ್ಪಾಡಿ,ಹರೀಶ್ ಗುತ್ತಿಗಾರುಮೂಲೆ ಮತ್ತಿತರರು ಉಪಸ್ಥಿತರಿದ್ದರು.







