ಸುಳ್ಯ ನ್ಯಾಯಾಲಯದಿಂದ ಆರೋಪಿಗೆ ದೋಷ ಮುಕ್ತ ಆದೇಶ
ಅರಂತೋಡು: ಅಕ್ರಮ ಮಧ್ಯ ಮಾರಾಟ ಆರೋಪದಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ವಿರುದ್ಧ ಸೂಕ್ತ ಸಾಕ್ಷಾಧಾರದ ಕೊರತೆ ಹಿನ್ನೆಲೆಯಲ್ಲಿ ಆರೋಪಿಗೆ ದೋಷ ಮುಕ್ತ ಆದೇಶ ನೀಡಿ ತೀರ್ಪು ನೀಡಿದೆ.














2024 ರ ನವಂಬರ್ 23ರಂದು ಆರೋಪಿತ ದಿನೇಶ್ ಎಂಬಾತನು ಕಾನೂನು ಬಾಹಿರವಾಗಿ ಮಧ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ವೈನ್ ಶಾಪ್ ನಿಂದ ಖರೀದಿಸಿ ಅರಂತೋಡು ಪೇಟೆಯ ಅಡ್ಕ ಬಳೆಗೆ ಹೋಗುವ ರಸ್ತೆ ಬದಿಯಲ್ಲಿರುವ ತನ್ನ ಚಿಕನ್ ಸೆಂಟರ್ ನಲ್ಲಿ ಪರವಾನಿಗೆ ಇಲ್ಲದೆ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ಸರಸ್ವತಿ ಬಿ.ಟಿ ರವರು ಆರೋಪಿತ ದಿನೇಶ್ ರವರ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32 34 ರ ಪ್ರಕಾರ ಅಪರಾಧ ಎಸಗಿದ್ದಾನೆ ಎಂದು ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು ಆರೋಪಿತರ ವಿರುದ್ಧ ಸುಳ್ಯ ಹಿರಿಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ಹಿರಿಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶೆಯವರಾದ ಶ್ರೀಮತಿ ಟಿ ದಮಯಂತಿ ಸೋಮಯ್ಯ ರವರು ಆರೋಪಿಯ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿ ಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ದಿನಾಂಕ ಅ.28ರಂದು ಆರೋಪಿಯನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿರುತ್ತಾರೆ.
ಆರೋಪಿಯ ಪರವಾಗಿ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ.ವಿ ಗೌಡ, ರಾಜೇಶ್ ಬಿ.ಜಿ,ಶ್ಯಾಮ್ ಪ್ರಸಾದ್ ಏನ್. ಕೆ ಹಾಗೂ ವಿಮಲೇಶ್ ಗೌಡ ರವರು ವಾದಿಸಿದ್ದರು.







