ಸೇವಾಜೆ ಮಡಪ್ಪಾಡಿ ರಸ್ತೆ ಸಂಚಾರಕ್ಕೆ ತಡೆ
ಕಳೆದೆರಡು ಸುರಿಯುತ್ತಿರುವ ಭಾರೀ ಮಳೆಗೆ ಸಣ್ಣ ಸಣ್ಣ ನದಿಗಳು ಉಕ್ಕಿ ಹರಿಯುತ್ತಿದೆ.
ಸೇವಾಜೆ – ಮಡಪ್ಪಾಡಿ ರಸ್ತೆಯ ಶೆಟ್ಟಿಮಜಲು ಎಂಬಲ್ಲಿ ಸೇವಾಜೆ ಹೊಳೆಯ ನೀರು ಬಂದು ರಸ್ತೆಯಲ್ಲಿ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಅಲ್ಲದೇ ಇದೇ ರಸ್ತೆ ಗೋಳಿಯಡಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಸಂಚಾರ ವ್ಯತ್ಯಯವಾಗಿರುವುದಾಗಿ ತಿಳಿದು ಬಂದಿದೆ.
ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರು ವಿನಲ್ಲಿ ಅಂಬೆ ಕಲ್ಲು ಜಾಲು ಮನೆ ಸಂಪರ್ಕಿಸುವ ರಸ್ತೆ ಅತಿಯಾದ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುತ್ತದೆ.
ಅಲ್ಲದೇ ಶೆಟ್ಟಿ ಮಜಲು – ಪೂಂಬಾಡಿ ರಸ್ತೆಯು ಮುಳುಗಡೆಯಾಗಿದೆ.