ಸುಳ್ಯ : ಜೇಸಿಐ ವಲಯ ಉಪಾಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆಯವರಿಗೆ ಸನ್ಮಾನ

0

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಜೇಸಿಐ ಭಾರತ ವಲಯ ಹದಿನೈದು ಉಪಾಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಜೇಸಿಐ ಸುಳ್ಯ ಪಯಸ್ವಿನಿ ಪೂರ್ವ ಅಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆಯವರನ್ನು ಸುಳ್ಯದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವ ಅಧ್ಯಕ್ಷರುಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಭಾದ್ಯಕ್ಷತೆಯನ್ನು ಸುಳ್ಯ ಪಯಸ್ವಿನಿ ಸೀನಿಯರ್ ಛೇಂಬರ್ ಅಧ್ಯಕ್ಷ ಜೇಸಿ ಪಿ ಎಸ್ ಗಂಗಾಧರ ವಹಿಸಿದ್ದರು. ಈ ಸಂದರ್ಭದಲ್ಲಿ ಜೇಸಿಐ ವಲಯ ಹದಿನೈದರ ಪೂರ್ವ ಅಧ್ಯಕ್ಷ ಜೇಸಿ ಅಶೋಕ್ ಚೂಂತಾರು, ಜೇಸಿಐ ಸುಳ್ಯ ಪಯಸ್ವಿನಿಯ ಸ್ಥಾಪಕಾಧ್ಯಕ್ಷ ಜೇಸಿ ಧನಂಜಯ ಮದುವೆಗದ್ದೆ, ಪೂರ್ವ ಅಧ್ಯಕ್ಷರುಗಳಾದ ಜೇಸಿ ಎಂ ಬಿ ಸದಾಶಿವ, ಜೇಸಿ ಕೆ ಆರ್ ಗಂಗಾಧರ, ಜೇಸಿ ಎಸ್ ಆರ್ ಸೂರಯ್ಯ, ಜೇಸಿ ಸೀತಾರಾಮ ಕೇವಳ, ಜೇಸಿ ದಿನೇಶ್ ಮಡಪ್ಪಾಡಿ, ಜೇಸಿ ದಿನೇಶ್ ಅಂಬೆಕಲ್ಲು, ಜೇಸಿ ಜಯಪ್ರಕಾಶ್ ಕೆ, ಜೇಸಿ ಮೊಹನ್ ಎ.ಕೆ, ಜೇಸಿ ದೇವಿಪ್ರಸಾದ್ ಕುದ್ಪಾಜೆ, ಭೀಮರಾವ್ ವಾಷ್ಠರ್, ಪ್ರಸಾದ್ ಕೆಮ್ಮಿಂಜೆ, ಜೇಸಿ ಲೋಕೇಶ್ ಪೆರ್ಲಂಪಾಡಿ, ಜೇಸಿ ಗುರು ರಾಜ್ ಅಜ್ಜಾವರ, ಘಟಕಾದ್ಯಕ್ಷ ಜೇಸಿ ರಂಜಿತ್ ಕುಕ್ಕೆಟ್ಟಿ, 2023ನೇ ಸಾಲಿನ ಚುನಾಯಿತ ಅಧ್ಯಕ್ಷ ಜೇಸಿ ನವೀನ್ ಕುಮಾರ್ ಕೂಕುಲುಮಜಲು, 2023 ನೇ ಸಾಲಿನ ಚುನಾಯಿತ ಕಾರ್ಯದರ್ಶಿ ಜೇಸಿ ಸುರೇಶ್ ಕಾಮತ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.