ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ

0

ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಹಾಗೂ ವಿದ್ಯಾರ್ಥಿಗಳಿಂದ ಹಲವು ಕಾರ್ಯಕ್ರಮಗಳು ಜರುಗಿತು. ಸ್ಕೂಲ್ ಸಂಚಾಲಕ ಬಿ.ಎ.ಬಶೀರ್ ಧ್ವಜಾರೋಹಣ ನೆರವೇರಿಸಿದರು. ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ರಹಿಮಾನ್.ಟಿ ಹಾಗೂ ನಿರ್ದೇಶಕ ಶಾಫಿ.ಎಂ.ಎ, ಮಾತನಾಡಿದರು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅಬೂಬಕ್ಕರ್ ಯು.ಎಚ್, ಝಖರಿಯ್ಯಾ ಜುಮಾ ಮಸೀದಿ ಆಡಳಿತಾಧಿಕಾರಿ ಸಹಾಯಕರಾದ ಆಶಿರ್ ಎ.ಬಿ,
ಬಶೀರ್.ಕೆ.ಎ, ಅಬ್ದುಲ್ ರಹಿಮಾನ್.ಕೆ, ಅಜರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನೈನಾ ಸ್ವಾಗತಿಸಿ ಅಧ್ಯಾಪಕಿ ಅಶ್ವಿನಿ ವಂದಿಸಿದರು. ಅಧ್ಯಾಪಕಿ ಶೆಖೀನಾ ಕಾರ್ಯಕ್ರಮ ನಿರೂಪಿಸಿದರು.