ಸುಳ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಂದೂಕು ಪರವಾನಿಗೆ ಹೊಂದಿರುವವರು ತಮ್ಮ ತಮ್ಮ ಬಂದೂಕುಗಳನ್ನು ಸುಳ್ಯ ಪೊಲೀಸ್ ಠಾಣೆಗೆ ತಂದು ಒಪ್ಪಿಸುವಂತೆ ಸುಳ್ಯ ಪೊಲೀಸ್ ಠಾಣಾ ವತಿಯಿಂದ ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತವಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ತಮ್ಮತಮ್ಮ ಬಂದೂಕುಗಳನ್ನು ಸಂಬಂಧಪಟ್ಟವರಲ್ಲಿ ಠೇವಣಿ ಇರಿಸಿ ಠಾಣೆಗೆ ರಶೀದಿಯನ್ನು ತಂದು ಒಪ್ಪಿಸುವಂತೆ ಪೊಲೀಸ್ ಠಾಣಾ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.