ಗೃಹಜ್ಯೋತಿಯ ಯೋಜನೆಗೆ ಆರ್ ಆರ್ ನಂಬರ್ ನ ಹೆಸರು ಬದಲಾವಣೆ

0

ನಿರಾಕ್ಷೇಪಣಾ ಪತ್ರ ನೀಡಲು ಪಂಚಾಯತ್ ನಲ್ಲಿ‌ ಸೂಕ್ತ ವ್ಯವಸ್ಥೆ ಮಾಡುವಂತೆ ಉಸ್ತುವಾರಿ ಸಚಿವರಿಗೆ ರಾಜರಾಂ ಭಟ್ ಬೆಟ್ಟ ಮನವಿ

ಗೃಹಜ್ಯೋತಿ ಯೋಜನೆ ಪಡೆಯಲು ಆರ್ ಆರ್‌ ನಂಬರ್ ಈಗಾಗಲೇ ಮರಣ ಹೊಂದಿರುವ ಹೆಸರಲ್ಲಿದ್ದರೆ ಹೆಸರು ಬದಲಾವಣೆ ಆಗಬೇಕಾಗುತ್ತದೆ. ಅದಕ್ಕೆ ಮನೆ ತೆರಿಗೆ ರಸೀದಿ ನೀಡಬೇಕಾಗುತ್ತದೆ. ಆದರೆ ಮನೆ ತೆರಿಗೆಯೂ ಮರಣ ಹೊಂದಿದವರ ಹೆಸರಲ್ಲಿದ್ದರೆ ಪಂಚಾಯತ್ ನಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕಾಗುತ್ತದೆ.

ಆದರೆ ನಿರಾಕ್ಷೇಪಣಾ ಪತ್ರ ನೀಡಲು ಕೆಲವು ಪಂಚಾಯತ್ ಅಧಿಕಾರಿಗಳು ನಿರಾಕರಿಸುತ್ತಿರುವುದರಿಂದ ಅನೇಕರು ಈ ಯೋಜನೆಯಿಂದ‌ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ವಾರಿಸುದಾರರಿಗೆ ಒಪ್ಪಿಗೆ ಪತ್ರ ಪಡೆದು ನಿರಾಕ್ಷೇಪಣಾ ಪತ್ರ ನೀಡುವಂತೆ ವ್ಯವಸ್ಥೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಪ್ರಗತಿಪರ ಕೃಷಿಕರಾದ ಬೆಟ್ಟ ರಾಜಾರಾಮ್ ಭಟ್ ರವರು ದ.ಕ. ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ರವರಿಗೆ ಮನವಿ ಸಲ್ಲಿಸಿದರು.

ಅಲ್ಲದೇ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಅಡಿಕೆ ಕೃಷಿಕರ ಬೆಳೆ ನಾಶ ಆಗುತ್ತಿರುವುದರಿಂದ 2023-24ನೇ ಸಾಲಿನ ವಿಮಾ ಕಂತು ಕಟ್ಟಲು ಸಹಕಾರಿ ಸಂಘಗಳಿಗೆ ಇನ್ನೂ ಸೂಚನೆ ಬಂದಿಲ್ಲ. ವಾಸ್ತವವಾಗಿ ಜೂನ್ 30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹೀಗಾಗಿ ಹವಾಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಅಮಲ ರಾಮಚಂದ್ರ, ಮುಖಂಡರಾದ ಜಯರಾಂ ಭಟ್ ಬೆಟ್ಟ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಾಫ ಜತೆಗಿದ್ದರು.