ಸುಳ್ಯ ತಾಲೂಕಿನ ಶಿಕ್ಷಕರ ವರ್ಗಾವಣೆ

0

ಯಾವ ಶಾಲೆಗೆ ಯಾರು…?

ಸುಳ್ಯ ತಾಲೂಕಿನಲ್ಲಿ (ಹೆಚ್ಚುವರಿ ಶಿಕ್ಷಕರು) ೧೫ ಪ್ರಾಥಮಿಕ, ೪ ವೃತ್ತಿ ಪರ, ೪ ಮಂದಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ವರ್ಗಾವಣೆಯಾಗಿದೆ.
ಜಾಲ್ಸೂರು ಗ್ರಾಮದ ಕೆಮನಬಳ್ಳಿ ಕಿ.ಪ್ರಾ.ಶಾಲೆಯ ಶಿಕ್ಷಕಿ ರತಿ ಕನಕಮಜಲು ಗ್ರಾಮದ ಮುಗೇರು ಶಾಲೆಗೆ, ಕುಕ್ಕೆಟ್ಟಿ ಕಿ.ಪ್ರಾ.ಶಾಲೆಯ ಶಿಕ್ಷಕಿ ಪಾರ್ವತಿ ಎನ್ ಸುಳ್ಯ ಶಾಂತಿನಗರ ಹಿ.ಪ್ರಾ.ಶಾಲೆಗೆ, ಕುಕ್ಕೆಟ್ಟಿ ಕಿ.ಪ್ರಾ.ಶಾಲೆಯ ಸುಶೀಲ ಕೆಯವರು ಕದಿಕಡ್ಕ ಶಾಲೆಗೆ, ಇಡ್ಯಡ್ಕ ಹಿ.ಪ್ರಾ.ಶಾಲೆಯ ಗೀತಾ ಕುಮಾರಿ ಕೆ ಸುಳ್ಯ ಕೊಡಿಯಾಲಬೈಲು ಸರಕಾರಿ ಶಾಲೆಗೆ, ಸಂಪಾಜೆಯಿಂದ ಚಂದ್ರಾವತಿ ಎಂ ರವರು ಸುಳ್ಯ ಗಾಂಧಿನಗರ ಕೆಪಿಎಸ್ ಗೆ, ಪಾಟಾಜೆ ಶಾಲೆಯಿಂದ ಸ್ವರ್ಣಲತಾ ಎಂಬವರು ಮುಗೇರು ಶಾಲೆಗೆ, ನಿಡುಬೆ ಶಾಲೆಯಿಂದ ಪ್ರಮೀಳಾ ಎಂಬವರು ದೇವರಕಾನ ಶಾಲೆಗೆ, ದೊಡ್ಡತೋಟ ಹಿ.ಪ್ರಾ.ಶಾಲೆಯ ಮಮತ ಕೆಯವರು ಇಂದ್ರಾಜೆ ಕಿ.ಪ್ರಾ.ಶಾಲೆಗೆ, ಆಲೆಟ್ಟಿ ಹಿ.ಪ್ರಾ.ಶಾಲೆಯ ಕಲ್ಪಲತ ಪಿ.ಎಸ್. ರವರು ಅಜ್ಜಾವರ ಹಿ.ಪ್ರಾ.ಶಾಲೆಗೆ, ಪೇರಾಲು ಶಾಲೆಯಿಂದ ಸುನಂದಾ ಜಿ ಯವರು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯಕ್ಕೆ, ಮುಡ್ನೂರು ಮರ್ಕಂಜದಿಂದ ಚಿನ್ನಮ್ಮ ಪಿ ರವರು ತೊಡಿಕಾನ ಹಿ.ಪ್ರಾ.ಶಾಲೆಗೆ, ಸಂಪಾಜೆ ಹಿ.ಪ್ರಾ.ಶಾಲೆಯ ವನಿತ ಕುಮಾರಿಯವರು ಮಂಡೆಕೋಲು ಹಿ.ಪ್ರಾ.ಶಾಲೆಗೆ, ಕೊಡಿಯಾಲ ಹಿ.ಪ್ರಾ.ಶಾಲೆಯ ವಿಜಯ ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಗೆ, ಕೊಡಿಯಾಲ ಹಿ.ಪ್ರಾ.ಶಾಲೆಯ ಸಿದ್ಧರಾಜು ಎಂ ರವರು ಅಜ್ಜಾವರ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಚಿತ್ರಕಲಾ ಶಿಕ್ಷಕ ಮರ್ಕಂಜ ಪ್ರೌಢ ಶಾಲೆಯ ಕೆಂಚವೀರಪ್ಪರವರು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪ್ರೌಢಶಾಲೆಗೆ, ಆಲೆಟ್ಟಿ ಪ್ರೌಢಶಾಲೆಯ ಶಿಕ್ಷಕಿ ಚೂಡಾಮಣಿ ಗುತ್ತಿಗಾರು ಪ್ರೌಢಶಾಲೆಗೆ, ಅಜ್ಜಾವರ ಪ್ರೌಢಶಾಲೆಯ ಪ್ರಭಾವತಿಯವರು ಬೆಳ್ಳಾರೆ ಕೆಪಿಎಸ್ ಗೆ, ಎಡಮಂಗಲ ಶಾಲೆಯ ನೇತ್ರಾವತಿಯವರು ಬೆಳ್ತಂಡಗಿ ತಾಲೂಕಿನ ಕೊಕ್ಕಡ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಕೆ.ಎನ್.ರಿಗೆ ಐವರ್ನಾಡು ಹಿ.ಪ್ರಾ.ಶಾಲೆಗೆ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್ ಕೆ ರಿಗೆ ಕಿ.ಪ್ರಾ.ಶಾಲೆ ಕಾಯರ್ತಡ್ಕ, ಭವಾನಿಶಂಕರ್ ಕೆ ಯವರಿಗೆ ಐವರ್ನಾಡು ಹಿ.ಪ್ರಾ.ಶಾಲೆಗೆ, ಸವಿತಾ ಕುಮಾರಿ ಎಸ್ ರಿಗೆ ಗುತ್ತಿಗಾರು ಹಿ.ಪ್ರಾ.ಶಾಲೆಗೆ ವರ್ಗಾವಣೆ ಆದೇಶವಾಗಿದೆ. ವರ್ಗಾವಣೆಗೊಂಡಿರುವ ಸಮೂಹ ಸಂಪನ್ಮೂಲ ವ್ಯಕ್ತಿಗಳು ತಮ್ಮ ಸ್ಥಾನಕ್ಕೆ ಹೊಸಬರು ಆಯ್ಕೆಯಾಗಿ ಬರುವವರೆಗೆ ಅದೇ ಸ್ಥಾನದಲ್ಲಿ ಮುಂದುವರಿಯಬಹುದೆಂದು ಹೇಳಲಾಗುತ್ತಿದೆ.