ಏಣಾವರ: KMJ, SჄS, SSF, SBS ಯೂನಿಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0
  ಏಣಾವರ ಕರ್ನಾಟಕ ಮುಸ್ಲಿಂ ಜಮಾಅತ್, SჄS, SSF ಹಾಗೂ SBS ಸಂಯುಕ್ತವಾಗಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಮಿಫ್ತಾಹುಲ್ ಉಲೂಂ ಮದರಸ ವಠಾರದಲ್ಲಿ ನಡೆಸಲಾಯಿತು. 

ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಪ್ರಾರ್ಥನೆ ಮೂಲಕ ಚಾಲನೆಗೊಂಡು ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಇಬ್ರಾಹಿಂ ಎ.ವೈ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಿಫ್ತಾಹುಲ್ ಉಲೂಂ ಮದರಸ ಏಣಾವರ ಇದರ SBS ವಿಧ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. 

ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಭಾಷಣ ವನ್ನು ಎ.ಎಂ.ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ಕಲ್ಲುಗುಂಡಿ ಯವರು ನಡೆಸಿದರು. ಗಣ್ಯ ಅತಿಥಿಗಳ ಶುಭನುಡಿಗಳ ನಂತರ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 


ಬಳಿಕ ವಿಧ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಸ್ವೀಟ್ ವೋರ್ಡ್ಸ್ ಹೇಳಿಸಲಾಯಿತು. ಕಾರ್ಯಕ್ರಮದಲ್ಲಿ ಮದರಸ ಉಸ್ತುವಾರಿ ಇಬ್ರಾಹಿಂ ಜಿ.ಎ, SჄS ಅಧ್ಯಕ್ಷರಾದ ನಿಝಾಮುದ್ದೀನ್ ಕೊಯಂಗಿ, ಎಸ್ಸೆಸ್ಸಫ್ ಯೂನಿಟ್ ಅಧ್ಯಕ್ಷರಾದ ಅನ್ವರ್, ಎಸ್ಸೆಸ್ಸಫ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಏಣಾವರ ಹಾಗೂ ಸ್ಥಳೀಯ ನಾಯಕರು, ಕಾರ್ಯಕರ್ತರು ಮತ್ತು ಮದರಸ ವಿಧ್ಯಾರ್ಥಿಗಳು ಭಾಗವಹಿಸಿದರು. ಕೊನೆಯಲ್ಲಿ ಸಿಹಿ ವಿತರಿಸಲಾಯಿತು. SBS ಪ್ರಧಾನ ಕಾರ್ಯದರ್ಶಿ ಸಾಬಿಕ್ ಸ್ವಾಗತಿಸಿ ಅಝೀಝ್ ಮಾಸ್ಟರ್ ವಂದಿಸಿದರು. ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.