ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನ ಚೈತನ್ಯ ಸಂಜೀವಿನಿ ಸಂಘದ ಉದ್ಘಾಟನೆ

0

ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಸ್ನೇಹಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಿಕಲ ಚೇತನ ಚೈತನ್ಯ ಒಕ್ಕೂಟದ ಉದ್ಘಾಟನೆಯು ಆ.15 ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ,ನಿಯೋಜಿತ ಉಪಾಧ್ಯಕ್ಷೆ ಶಹಿನಾಜ್, ಸದಸ್ಯರಾದ ಪದ್ಮಾನಾಭ ಶೆಟ್ಟಿ, ಸಚಿನ್ ರಾಜ್ ಶೆಟ್ಟಿ, ಶ್ರೀಮತಿ ಗುಲಾಬಿ,ಶ್ರೀಮತಿ ರೇವತಿ,ಮಾಧವ,ಪಂಚಾಯತ್ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಪ್ರಶಾಂತ್ ಸ್ವಾಗತಿಸಿ,ವಂದಿಸಿದರು.