ಜಟ್ಟಿಪಳ್ಳದಲ್ಲಿ ನಾಗರಿಕರಿಂದ ಸ್ವಾತಂತ್ರ್ಯ ನಡಿಗೆ

0

ಜಟ್ಟಿಪಳ್ಳ, ಕಾನತಿಲ್ಲ ಮತ್ತು ಬೊಳ್ಳಿಯಮಜಲು ಪರಿಸರದ ನಾಗರಿಕರು ಸೇರಿ ಸುದ್ದಿ ಜನಹಿತ ವೇದಿಕೆ ಜಟ್ಟಿಪಳ್ಳ ಇದರ ನೇತೃತ್ವದಲ್ಲಿ 4ನೇ ವರ್ಷದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವು ಸ್ವಾತಂತ್ರ್ಯ ದಿನವಾದ ಇಂದು ನಡೆಯಿತು.

ಜಟ್ಟಿಪಳ್ಳ, ಕಾನತಿಲ್ಲ ಮತ್ತು ಬೊಳ್ಳಿಯಮಜಲು ಪರಿಸರದ ನಾಗರಿಕರು ಬೆಳ್ಳಿಗ್ಗೆ 7.30ಕ್ಕೆ ಮನೆಯಿಂದ ಹೊರಟು ಸುಸ್ವಾಗತಂ ಜಂಕ್ಷನ್ ಬಳಿ ಸೇರಿ ಅಲ್ಲಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದವರೆಗೆ ಹೋಗಿ ಅಲ್ಲಿಂದ ಹಿಂತಿರುಗಿ ಜಟ್ಟಿಪಳ್ಳದಲ್ಲಿರುವ ದೇವರಕಟ್ಟೆಯವರೆಗೆ ಸ್ವಾತಂತ್ರ್ಯ ನಡಿಗೆ ನಡೆಸಿದರು.

ಅಲ್ಲಿ ಸುದ್ದಿ ಜನಂದೋಲನ ವೇದಿಕೆಯ ಪ್ರಜಾಪ್ರಭುತ್ವದ ಆಶಯದ ಘೋಷಣೆಯನ್ನು ಕೂಗಿದರು, ಬಳಿಕ ರಾಷ್ಟಗೀತೆ ಹಾಡಲಾಯಿತು. ಸುದ್ದಿ ಜನಹಿತ ವೇದಿಕೆಯ ಸಂಚಾಲಕರು ಹರೀಶ್ ಬಂಟ್ವಾಳ್ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯ ಅಧ್ಯಕ್ಷ ದಿನೇಶ್ ಮಡಪ್ಪಾಡಿ ವಂದಿಸಿದರು. ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ಗೋಪಾಲ ಮತ್ತು ಸದಸ್ಯಯರು, ಗ್ರೀನ್ ಬಾಯ್ಸ್ ಅಧ್ಯಕ್ಷ ರಶೀದ್ ಜಟ್ಟಿಪಲ್ಲ, ಕಪಿಲ ಯುವಕ ಮಂಡಲದ ಗೌರವಾಧ್ಯಕ್ಷ ವಿಶು ಕುಮಾರ್ ಮತ್ತು ಸದಸ್ಯರು, ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಎಂ.ಆರ್ ಹರಿಚಂದ್ರ ಹಾಗೂ ಸದಸ್ಯರು ಊರ ನಾಗರಿಕರು ಉಪಸ್ಥಿತರಿದ್ದರು.

ಕೆ. ಎಸ್. ಆರ್. ಟಿ. ಸಿ ಅಧಿಕಾರಿ ಸಾಂತಪ್ಪ ಗೌಡ, ರಶೀದ್ ಜಟ್ಟಿಪ್ಪಲ್ಲ ಮತ್ತು ಶರೀಫ್ ಜಟ್ಟಿಪಲ್ಲ ಸಿಹಿ ತಿಂಡಿ ವ್ಯವಸ್ಥೆ ಮಾಡಿದರು.