ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಧ್ವಜಾರೋಹಣ ನೆರವೇರಿಸಿದರು. ನಂತರ ಮಲ್ಲಾಜೆ ದೊಡ್ಡಣ್ಣ ಶೆಟ್ಟಿ ಕೆರೆಯ ಬಳಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಿಲಾಫಲಕ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ದೊಡ್ಡಣ್ಣ ಶೆಟ್ಟಿ ಕೆರೆಯ ಬಳಿ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಚಾಂತಾಳ ನೆರವೇರಿಸಿದರು.

ಹಾಗೂ ಶಿಲಾಫಲಕವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಹಾಗೂ ನಾಮಫಲಕವನ್ನು ಉಪಾಧ್ಯಕ್ಷರಾದ ಅಶ್ವಥ್ ಯಲದಾಳು ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಪುಷ್ಪರಾಜ್ ಪಡ್ಪು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ವಥ್ ಯಲದಾಳು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪುಷ್ಪರಾಜ್ ಪಡ್ಪು, ಮೋಹಿನಿ ಕಟ್ಟ, ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಕೊಲ್ಲಮೊಗ್ರು, ನೇತ್ರಾವತಿ ಗಡಿಕಲ್ಲು, ಬಂಗ್ಲೆಗುಡ್ಡೆ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ, ಸಹ ಶಿಕ್ಷಕರಾದ ಸುಭಾಷ್, ರೇಷ್ಮಾ, ಶಾಲಾ ವಿದ್ಯಾರ್ಥಿಗಳು, ಕಿಶೋರ್ ಕೊಂದಾಳ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ನವ್ಯ ನಡುಗಲ್ಲು, ಲೀಲಾವತಿ ಶಿರೂರು, ಮಮತಾ ಮರಕತ, ಆಶಿಶ್ ಕಟ್ಟೆಮನೆ ಹಾಗೂ ಕೊಲ್ಲಮೊಗ್ರು ಕೀರ್ತಿ ಸಂಜೀವಿನಿ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ವಿಮಲಾಕ್ಷಿ ಗೋಳ್ಯಾಡಿ, ವಸಂತಿ ತಂಬಿನಡ್ಕ, ಹೇಮಂತ್ ಚಾಳೆಪ್ಪಾಡಿ, ಗುರುಪ್ರಸಾದ್ ತಳೂರು, ಕುಮಾರ್ ಶಿರೂರು, ಆಕಾಶ್ ಕೊರಂಬಟ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.