ಪಾಟಾಳಿ ಯಾನೆ ಗಾಣಿಗ ಸಮುದಾಯದ ಪ್ರತಿ ಮನೆಯಲ್ಲೂ ವೃಕ್ಷ ಅಭಿಯಾನಕ್ಕೆ ಚಾಲನೆ

0

ಪೆರ್ಣೆ ಮುಚ್ಚಿಲೋಟ್ ಶ್ರೀ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ನೆನಪು

ಸೀತಾಂಗೋಳಿ ಸಮೀಪದ ಪೆರ್ಣೆ ಮುಚ್ಚಿಲೋಟ್ ಶ್ರೀ ಭಗವತಿ ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ 2024 ರಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವವನ್ನು ಸದಾ ಸ್ಮರಣೀಯವನ್ನಾಗಿಸುವ ಉzಶದೊಂದಿಗೆ 3000 ಫಲ ವೃಕ್ಷದ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಾಟಾಳಿ ಯಾನೆ ಗಾಣಿಗ ಸಮುದಾಯದ ಎಲ್ಲ ಮನೆಗಳಲ್ಲೂ ಕೂಡಾ ಗಿಡಗಳನ್ನು ನೆಡಲಾಗುತ್ತಿದೆ.

2024ರಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವವನ್ನು ಅವಿಸ್ಮರಣೀಯ ಗೊಳಿಸುವ ಉzಶದಿಂದ ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲೞ ಎಂಬ ವಿಶೇಷ ಪರಿಕಲ್ಪನೆಯಲ್ಲಿ ಸಮಾಜದ ಪ್ರತಿ ಮನೆಯಲ್ಲಿ ವೃಕ್ಷ ಅಭಿಯಾನ ೩೦೦೦ ಫಲವೃಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಕಳಿಯಾಟ ಸಮಿತಿ ಹಾಗೂ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದು ಆ.20ರಂದು ಚಾಲನೆ ನೀಡಲಾಗಿದೆ.

ಪ್ರಕೃತಿಯ ಸಂರಕ್ಷಣೆಗೆ ಪ್ರಥಮ ಪ್ರಾಶಸ್ಯ ನೀಡಬೇಕೆಂಬ ಆಶಯನ್ನು ಎತ್ತಿ ಹಿಡಿದು ಗಿಡ ನೆಡುವ ಮತ್ತು ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ನಾಡನ್ನು ಪರಿಪೂರ್ಣವಾಗಿ ಭಕ್ತಿ ಸಾಗರದಲ್ಲಿ ಮಿಂದೆಬ್ಬಿಸುವ ಕಳಿಯಾಟ ಮಹೋತ್ಸವವು ಮುಗಿದು ಹೋದರೂ, ಹಚ್ಚ ಹಸಿರಿನೊಂದಿಗೆ ಪ್ರಕೃತಿಯಲ್ಲಿ ತಲೆಯೆತ್ತಿ ಮೆರೆದಾಡಲು ಈ ಮರಗಳಿರಬೇಕು ಎಂಬ ಆಶಯದೊಂದಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿ ಮನೆ ಹಾಗೂ ಇತರ ಬಂಧು ಮಿತ್ರರ ಮನೆಗಳು ಸೇರಿ ಏಕಕಾಲದಲ್ಲಿ ಒಟ್ಟು 3000 ಸಸಿಗಳನ್ನು ನೆಡಲಾಗುವುದು.