ಬಿಜೆಪಿ ಕಾರ್ಯಕರ್ತ ರಮಾನಂದ ಬಾಳೆಕಜೆ ನಿಧನ

0

ಕೊಡಗು ಸಂಪಾಜೆ ಗ್ರಾಮದ ಬಿಜೆಪಿ ಕಾರ್ಯಕರ್ತ ರಮಾನಂದ ಬಾಳೆಕಜೆ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರಿಗೆ ೬೮ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಂಗಮ್ಮ, ಪುತ್ರಿ ಸೌಮ್ಯಲತಾ, ಪುತ್ರ ರೋಹಿತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು ಅಯೋಧ್ಯಾ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು.