ಇಂದು ಸುಳ್ಯ‌ ಸಿ.ಎ.‌ಬ್ಯಾಂಕ್ ಚುನಾವಣೆ : ಸಂಜೆ 4 ಗಂಟೆ ತನಕ‌ ಮತದಾನಕ್ಕೆ ಅವಕಾಶ

0

ಸಹಕಾರ ಭಾರತಿ – ಸಹಕಾರ ರಂಗದ ಅಭ್ಯರ್ಥಿಗಳ ಮಧ್ಯೆ ಫೈಟ್

ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆಯಲಿದ್ದು, ಸಹಕಾರ ಭಾರತಿ‌ ಹಾಗೂ ಸಹಕಾರ‌ ರಂಗದ ಅಭ್ಯರ್ಥಿಗಳ ಮಧ್ಯೆ ಆಡಳಿತ ಚುಕ್ಕಾಣಿ ಹಿಡಿಯಲು ಹೋರಾಟ ನಡೆಯಲಿದೆ. ಸುಳ್ಯ ರಥಬೀದಿಯಲ್ಲಿರುವ ರೋಟರಿ ವಿದ್ಯಾ ಸಂಸ್ಥೆ ವಠಾರದಲ್ಲಿ ಮತದಾನ ನಡೆಯಲಿದ್ದು ಸಂಜೆ 4 ಗಂಟೆ ವರೆಗೆ ಮತದಾನಕ್ಕೆ ಅವಕಾಶವಿದೆ.

ಸಹಕಾರ ಭಾರತಿಯ ಅಭ್ಯರ್ಥಿ ಗಳಾಗಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಎನ್.ಎ.ರಾಮಚಂದ್ರ, ಶಿವರಾಮ ಕೇರ್ಪಳ, ವಿಕ್ರಂ ಅಡ್ಪಂಗಾಯ, ಪ್ರಬೋದ್ ಶೆಟ್ಟಿ ಮೇನಾಲ, ವಾಸುದೇವ ಪುತ್ತಿಲ, ವೆಂಕಟ್ರಮಣ ಮುಳ್ಯ, ಎ ಮೀಸಲು ಸ್ಥಾನದಿಂದ ಹೇಮಂತ್ ಕುಮಾರ್ ಕಂದಡ್ಕ, ಬಿ ಮೀಸಲು ಸ್ಥಾನದಿಂದ ಸಿ.ಎ.ಬ್ಯಾಂಕ್ ಹಾಲಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಮಹಿಳಾ ಮೀಸಲು ಸ್ಥಾನಕ್ಕೆ ನವ್ಯಾ ಚಂದ್ರಶೇಖರ್ ಅಡ್ಪಂಗಾಯ ಹಾಗೂ ಹರಿಣಾಕ್ಷಿ ಬೇಲ್ಯ, ಎಸ್ಟಿ ಮೀಸಲು ಸ್ಥಾನದಿಂದ ಚಂದ್ರಶೇಖರ ದೊಡ್ಡೇರಿ, ಪ.ಜಾತಿ ಮೀಸಲು ಸ್ಥಾನದಿಂದ ಕೇಶವ ಹೊಸಗದ್ದೆ, ಸಾಲಗಾರರಲ್ಲದ ಕ್ಷೇತ್ರದಿಂದ ನ್ಯಾಯವಾದಿ ಚಂದ್ರಶೇಖರ ನಡುಮನೆ ಕಣದಲ್ಲಿದ್ದಾರೆ.

ಸಹಕಾರ ರಂಗದ ಅಭ್ಯರ್ಥಿಗಳಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಉಪಾಧ್ಯಕ್ಷ, ಬಿಜೆಪಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಅಜ್ಜಾವರ ಗ್ರಾಮ ಸಮಿತಿ ಬಿಜೆಪಿ ಮಾಜಿ ಅಧ್ಯಕ್ಷ ಶಶಿಧರ ಶಿರಾಜೆ, ರಾಮಚಂದ್ರ ಪೆಲ್ತಡ್ಕ, ರಾಹುಲ್ ಅಡ್ಪಂಗಾಯ, ವಿಶ್ವನಾಥ ಪಿ.ಎಸ್., ರವೀಶ ಎಂ., ಎ ಮೀಸಲು ಸ್ಥಾನದಿಂದ ಸುಳ್ಯ ಮೂರ್ತೆದಾರರ ಸಂಘದ ಅಧ್ಯಕ್ಷ ರಾಮಣ್ಣ ಪೂಜಾರಿ ಪೊಡುಂಬ, ಬಿ ಮೀಸಲು ಸ್ಥಾನದಿಂದ ವಿಜಯ ಕುಮಾರ್ ಪಡ್ಪು, ಮಹಿಳಾ ಮೀಸಲು ಸ್ಥಾನದಿಂದ ಲೀಲಾ ಮನಮೋಹನ್ ಹಾಗೂ ಜಯಂತಿ ಕೊಯಿಕುಳಿ, ಎಸ್ಟಿ ಮೀಸಲು ಸ್ಥಾನದಿಂದ ವಿಶ್ವನಾಥ ನೆಲ್ಲಿಬಂಗಾರಡ್ಕ, ಪ.ಜಾತಿ ಮೀಸಲು ಸ್ಥಾನದಿಂದ ಬಾಬು ಮುಗೇರ , ಸಾಲಗಾರರಲ್ಲದ ಕ್ಷೇತ್ರದಿಂದ ಲತೀಶ್ ಕುಮಾರ್ ರಾವ್ ಕಣದಲ್ಲಿದ್ದಾರೆ.

ಸುಳ್ಯ ರೋಟರಿ ವಿದ್ಯಾಸಂಸ್ಥೆ ಆವರಣದಲ್ಲಿ ಮತದಾನ ನಡೆಯುವುದು. ಇಂದೇ ಮತ ಎಣಿಕೆ ನಡೆಯಲಿದೆ. ಸುಳ್ಯ ಸಿ.ಎ.ಬ್ಯಾಂಕ್ ನಲ್ಲಿ ೧೦೦೨ ಮಂದಿ ಮತದಾನಕ್ಕೆ ಅರ್ಹರಾಗಿದ್ದು ಅವರಲ್ಲಿ ಸಾಲಗಾರರ ಕ್ಷೇತ್ರಕ್ಕೆ ೭೨೫ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ೨೭೭ ಮಂದಿ ಮತದಾರರಿದ್ದಾರೆ.