ಅಕ್ರಮ ಹೋರಿ ಸಾಗಾಟ; ವಳಲಂಬೆಯಲ್ಲಿ ಪೊಲೀಸ್ ವಶ

0

ಹರಿಹರಪಲ್ಲತ್ತಡ್ಕ ಕಡೆಯಿಂದ ಗುತ್ತಿಗಾರು ಕಡೆಗೆ ಬೊಲೆರೋದಲ್ಲಿ ಅಕ್ರಮವಾಗಿ ಹೋರಿಯೊಂದನ್ನು ಸಾಗಿಸುತ್ತಿದ್ದ ವೇಳೆ ಗುತ್ತಿಗಾರು ಬಳಿಯ ವಳಲಂಬೆಯಲ್ಲಿ ಸಾರ್ವಜನಿಕರ ಮಾಹಿತಿ ಆಧಾರದಲ್ಲಿ ಪೊಲೀಸರು ಅಡ್ಡಗಟ್ಟಿ ಹಿಡಿದ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಬೊಲೆರೋ(ಕೆಎ 12 ಎನ್4564) ಮತ್ತು ಅದರ ಚಾಲಕ ಸಂಪಾಜೆಯ ಸನತ್ ಮತ್ತು ಹೋರಿ ಸುಬ್ರಹ್ಮಣ್ಯ ಪೊಲೀಸರ ವಶದಲ್ಲಿದೆ. ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.