ಫೆ.08 ರಿಂದ ಫೆ.10 : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಫೆ.10 ರಂದು ಶ್ರೀ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ ಫೆ.10 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಫೆ.2 ರಂದು ಮುಹೂರ್ತದ ಗೊನೆ ಕಡಿಯಲಾಗುವುದು.
ಫೆ.08 ರಂದು ಬೆಳಿಗ್ಗೆ ಗಂಟೆ 8.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ,ಗಂಟೆ 10 .00 ಕ್ಕೆ ಉಗ್ರಾಣ ತುಂಬುವುದು.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 7.30 ರಿಂದ ರಂಗಪೂಜೆಗಳು ನಡೆಯಲಿದೆ.
ಫೆ.09 ರಂದು ಬೆಳಿಗ್ಗೆ ಗಂಟೆ 9.00 ರಿಂದ ಶತರುದ್ರಾಭಿಷೇಕ,ಅಶ್ವಥ್ಥನಾರಾಯಣ ಪೂಜೆ,108 ಕಾಯಿ ಗಣಪತಿ ಹೋಮ ನಡೆಯಲಿದೆ.ಪೂ.ಗಂಟೆ 10.30 ರಿಂದ ಭಜನೆ,ಕಲಶಾಭಿಷೇಕಗಳು ನಡೆಯಲಿದೆ.ಗಂಟೆ 12.30 ರಿಂದ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 6.00 ರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ.
ರಾತ್ರಿ ಗಂಟೆ 7.00 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ,ವಸಂತಕಟ್ಟೆ ಪೂಜೆ ನಡೆಯಲಿದೆ.
ಫೆ.10 ರಿಂದ ಪೂರ್ವಾಹ್ನ ಗಂಟೆ 8.30 ಕ್ಕೆ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಬರುವುದು.
ಪೂರ್ವಾಹ್ನ ಗಂಟೆ ,9.30 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ, ಶುದ್ಧಿ ಕಲಶ ನಡೆಯಲಿದೆ.
ಗಂಟೆ 12.30 ಕ್ಕೆ ಮಹಾಪೂಜೆ,ವೈದಿಕ ಮಂತ್ರಾಕ್ಷತೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00 ರಿಂದ ದೈವಗಳ ನಡಾವಳಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಫೆ.08 ರಂದು ಸಂಜೆ ಗಂಟೆ 6.00 ರಿಂದ ಬಾಂಜಿಕೋಡಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 6.30 ರಿಂದ ದೇರಾಜೆ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಐವರ್ನಾಡು ಸಂಜೀವಿನಿ ಸಂಘದ ಸದಸ್ಯೆಯರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಸಂಜೆ 7.30 ರಿಂದ ಜಿತೇಶ್ ಮ್ಯೂಸಿಕಲ್ಸ್ ಸಂಸ್ಥೆ ಸುಳ್ಯ ಇವರಿಂದ “ಕರೋಕೆ ಭಕ್ತಿಗಾನ ಸುಧೆ” ನಡೆಯಲಿದೆ.
ಸಂಜೆ ಗಂಟೆ 8.30 ರಿಂದ ಗೆಳೆಯರ ಬಳಗ ದೇರಾಜೆ ಐವರ್ನಾಡು ಪ್ರಾಯೋಜಕತ್ವದಲ್ಲಿ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪುತ್ತೂರು ಇವರಿಂದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.09 ರಂದು ಸಂಜೆ ಗಂಟೆ 7.00 ರಿಂದ “ಅಮರನಾಥ ಅಮರ ಕಥೆ” ನೃತ್ಯರೂಪಕ ನಡೆಯಲಿದೆ.
ರಾತ್ರಿ ಗಂಟೆ 9.30 ರಿಂದ ಶ್ರೀ ಪಂಚಲಿಂಗೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಆಶ್ರಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ಭೈರವಿ ನಾಟ್ಯಾಲಯ ಐವರ್ನಾಡು ಇವರಿಂದ ನಡೆಯಲಿದೆ.
ಫೆ.10 ರಂದು ಬೆಳಿಗ್ಗೆ ಗಂಟೆ 12.00 ರಿಂದ “ಭಕ್ತಿಗಾನ ಸುಧಾ ” ನಡೆಯಲಿದೆ.
ಸಂಜೆ ಗಂಟೆ 6.00 ರಿಂದ “ನೃತ್ಯಾರ್ಪಣಂ” ನಡೆಯಲಿದೆ.
ರಾತ್ರಿ ಗಂಟೆ 8.30 ರಿಂದ ಯಕ್ಷಸಿರಿ ಕಲಾವೇದಿಕೆ ಖಂಡಿಗೆಮೂಲೆ ಇವರಿಂದ “ಸಾಯುಜ್ಯ ಸಂಗ್ರಾಮ ” ಯಕ್ಷಗಾನ ನಡೆಯಲಿದೆ.