ಸುಳ್ಯ ಠಾಣಾ ಎಎಸ್ಐ ಗಿರಿಯಪ್ಪ ಗೌಡ ನಿವೃತ್ತಿ : ಮೂರು ದಶಕಗಳ ಪೊಲೀಸ್ ಸೇವೆ

0

ಸುಳ್ಯ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರಿಯಪ್ಪ ಗೌಡ ಮೂರು ದಶಕಗಳ ಸೇವೆಯ ಬಳಿಕ ನಿವೃತ್ತಿ ಗೊಂಡಿದ್ದಾರೆ.

ಕಳೆದ ಮೂರು ದಶಕಗಳಿಂದ ಅವರು ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಎರಡುವರೆ ವರ್ಷಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮಂಗಳೂರಿನಲ್ಲಿ ಪೊಲೀಸ್ ತರಬೇತಿ ಪಡೆದ ಅವರು 1992 ರಿಂದ ಪಡುಬಿದ್ರೆ, ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಮುಲ್ಕಿ, ಪೂಂಜಾಲಕಟ್ಟೆ, ಮುಲ್ಕಿ, ಪುತ್ತೂರು ಟ್ರಾಫಿಕ್ ಮುಂತಾದ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿ ಬಳಿಕ ಹೆಡ್ ಕಾನ್ಸ್ಟೇಬಲ್ ಬಳಿಕ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೂಲತಃ ಕಡಬ ತಾಲೂಕು ರಾಮಕುಂಜ ಗ್ರಾಮದ ಬರಮೇಲು ಮನೆ ದಿ.ಪೆರ್ಮಗೌಡ ಹಾಗೂ ದಿ.ಸೀತಮ್ಮ ದಂಪತಿಗಳ ಪುತ್ರರಾಗಿದ್ದಾರೆ.