ಕರಾಟೆಯಲ್ಲಿ ವಿಘ್ನೇಶ್ ಗುಂಡ್ಯ ರವರಿಗೆ ಬ್ಲಾಕ್ ಬೆಲ್ಟ್ ಗ್ರೇಡಿಂಗ್

0

ಸುಳ್ಯದ ಇಂಟರ್ ನ್ಯಾಶನಲ್ ಶಿಟೋ-ರಿಯೋ ಕರಾಟೆ ಸ್ಕೂಲ್ ನ ವಿದ್ಯಾರ್ಥಿ ವಿಘ್ನೇಶ್ ಗುಂಡ್ಯ ರವರು ಮಾ.9 ರಂದು ನಡೆದ ಬ್ಲಾಕ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆಯಲ್ಲಿ
ಬ್ಲಾಕ್ ಬೆಲ್ಟ್ ಪದವಿಯನ್ನು ಪಡಕೊಂಡಿರುತ್ತಾರೆ.

ರೋಟರಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ
ಪಿ ಯು ಸಿ ವಿದ್ಯಾರ್ಥಿ ಯಾಗಿರುತ್ತಾನೆ. ಈತ ಕರಾಟೆ ಶಿಕ್ಷಕ ಅರಂಬೂರು ಮೋಹನ ಎ.ಕೆ ಯವರ ಶಿಷ್ಯ.ಆಲೆಟ್ಟಿ‌ ಗುಂಡ್ಯ ಮನೆತನದ ಶ್ರೀಮತಿ ಚಂದ್ರಾವತಿ ಮತ್ತು ಹೇಮನಾಥ ಗೌಡರ ಪುತ್ರ.