ಮರ್ಕಂಜದ ತೋಟಚಾವಡಿಯಲ್ಲಿ ಮಾಡ ಜಾತ್ರೆಗೆ ತೆರೆ

0

ನಾಳೆ(ಎ.29) ಕ್ಷೇತ್ರದಲ್ಲಿ ಸತ್ಯನಾರಾಯಣ ಪೂಜೆ, ಶಿರಾಡಿ ದೈವದ ನೇಮ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂಧಪಟ್ಟ ಮಾಡ ಜಾತ್ರೆಯು ತೋಟಚಾವಡಿಯಲ್ಲಿ ಎ.24ರಿಂದ ನಡೆದು ಇಂದು ಸಮಾಪ್ತಿಗೊಂಡಿತು.

ಎ.26ರಂದು ತೋಟಚಾವಡಿಯಲ್ಲಿ ಮಿತ್ತೂರು ನಾಯರಿಗೆ ಟೊಪ್ಪಿಯಾಗಿ ಮಾಡಕ್ಕೆ ಬರುವುದು, ಮಾಡದಲ್ಲಿ ಹಿರಿಯರ ನೇಮ ನಡೆಯಿತು.

ಎ.27ರಂದು ರಾತ್ರಿ ಕಿರಿಯರ ಉಳ್ಳಾಕುಳಿಗೆ ವಾಲಸಿರಿಯಲ್ಲಿ ಸಿರಿಮುಡಿ ಮತ್ತು ಮಿತ್ತೂರು ನಾಯರ್ ಗೆ ಟೊಪ್ಪಿಯಾಗಿ ಮಾಡಕ್ಕೆ ಭಂಡಾರ ಬರುವುದು ನಡೆಯಿತು. ಹಾಗೂ ಎ.28(ಇಂದು) ಪೂರ್ವಾಹ್ನ ಮಿತ್ತೂರು ನಾಯರಿಗೆ ಮಾರಪು, ಮಂಞಪುಡಿ, ಪೀಡೆ ಬಿಡಿಸುವುದು, ಸುಳುಕಾಯಿ, ಅಂಬುಕಾಯಿ, ಮೇಲ್ಮಂಚಕ್ಕೆ ತೆಂಗಿನಕಾಯಿ ಒಡೆಯುವುದು, ತೋಟಚಾವಡಿಗೆ ಭಂಡಾರ ಹೊರಟು ತೋಟಚಾವಡಿಯಲ್ಲಿ ತೊಡಕ ಮಡಕ, ಬಟ್ಟಲು ಕಾಣಿಕೆ, ತೀರ್ಮಾನ ವಗೈರೆ ನಡೆದು ಬಳಿಕ ಮಹಾವಿಷ್ಣು ದೇವಾಲಯದಲ್ಲಿ ಮಹಾಪೂಜೆ ನಡೆಯಿತು.

ನಾಳೆ ಎ.29ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ತೋಟಚಾವಡಿಯಲ್ಲಿ ಶಿರಾಡಿ ಯಾನೆ ರಾಜಂ ದೈವದ ನೇಮ ನಡೆಯಲಿದೆ.