ಸುಳ್ಯದ ಹರೀಶ್ ಫಿಟ್ ನೆಸ್ ನಲ್ಲಿ ಒಂದನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ಕಾರ್ಯಕ್ರಮ

0

ಸುಳ್ಯದ ತಾಲೂಕು ಪಂಚಾಯತ್ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿರುವ ಹರೀಶ್ ಫಿಟ್ ನೆಸ್ ನಲ್ಲಿ ಒಂದನೇ ವರ್ಷದ ಪಾದಾರ್ಪಣೆಯ ಸಂಭ್ರಮವನ್ನು ಏ.28ರಂದು
ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಬಾಡಿ ಬಿಲ್ಡ್ ನಲ್ಲಿ
ಮಿಸ್ಟರ್ ಯುನಿವರ್ಸ್ , ಮಿಸ್ಟರ್ ಇಂಡಿಯಾ , ಮಿಸ್ಟರ್ ಕರ್ನಾಟಕ ಟೈಟಲ್ ವಿಜೇತ ದೀಪಕ್ ಕಾವೇರಪ್ಪ ಆಗಮಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇವರಿಗೆ ಸಂಸ್ಥೆಯ ಮಾಲಕರಾದ ಹರೀಶ್ ದಂಪತಿ ಸೇರಿ ಶಾಲು ಹೊದಿಸಿ ಗೌರವಿಸಿದರು.

ಬಳಿಕ ಕೇಕ್ ಕತ್ತರಿಸುವ ಮೂಲಕ ಒಂದನೇ ವರ್ಷದ ಪಾದಾರ್ಪಣೆಯನ್ನು ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಜಿಮ್ ನ ವಿದ್ಯಾರ್ಥಿಗಳು, ಮಾಲಕರ ಹಿತೈಷಿಗಳು ಉಪಸ್ಥಿತರಿದ್ದರು.