ಭಾರಿ ಗಾಳಿ-ಮಳೆ: ಕೂತ್ಕುಂಜದಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

0

ಭಾರಿ ಗಾಳಿ ಮಳೆಗೆ ಕೂತ್ಕುಂಜದಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿರುವ ಘಟನೆ ಮೇ.15 ರಂದು ವರದಿಯಾಗಿದೆ.

ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಕೂತ್ಕುಂಜ ಗ್ರಾಮದ ಹಬ್ಬಾರಹಿತ್ಲು ಚನಿಯ ಎಂಬವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿದ್ದು
ಮನೆಗೆ ಸಂಪೂರ್ಣ ಹಾನಿ ಆಗಿರುತ್ತದೆ.

ಈ ವೇಳೆ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಇದೀಗ ಚನಿಯ ರವರ ಮನೆಯವರು ಪಕ್ಕದವರ ಮನೆಯಲ್ಲಿ ಆಶ್ರಯದಲ್ಲಿದ್ದಾರೆ. ಸ್ಥಳಕ್ಕೆ ಗ್ರಾಮ ಕಂದಾಯ ಇಲಾಖೆಯವರು,

ಗ್ರಾಮ ಪಂಚಾಯತ್,ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ.