ಸಿಸ್ಟೋಝೋಮ ರೆಫ್ಲೆಕ್ಸ್ ಸಮಸ್ಯೆಯಿಂದ ಬಳಲಿದ ಹಸು

0

ಸುಳ್ಯದ ಪಶು ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಹಸುವಿನ ಹೊಟ್ಟೆಯಲ್ಲಿ ಕರು ಸಾವನ್ನಪ್ಪಿ, ನೋವಿನಿಂದ ಬಳಲುತ್ತಿದ್ದ ಹಸುವಿಗೆ ಸುಳ್ಯ ಪಶು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡಿರುವ ಘಟನೆ ವರದಿಯಾಗಿದೆ.

ಕೌಡಿಚಾರಿನ ಸುದೇಶ ಅವರ ಮನೆಯಲ್ಲಿ ಜರ್ಸಿ ಮಿಶ್ರ ತಳಿಯ ಹಸು ಒಂದು ಪ್ರಸವ ವೇದನೆಯಲ್ಲಿ ಬಳಲುತ್ತಿದ್ದು ಸುಳ್ಯದ ಪಶು ಆಸ್ಪತ್ರೆ ವೈದ್ಯರ ತಂಡದಿಂದ ಪಶು ಸಂಜೀವಿನಿ ಸಂಚಾರಿ ಪಶು ಚಿಕಿತ್ಸಾ ಘಟಕದ ಸೇವೆಯೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕರುವನ್ನು ಹೊರತೆಗೆಯಲಾಗಿ ಗರ್ಭಕೋಶದೊಳಗೆ ಅಸಹಜ ಬೆಳವಣಿಗೆಯಿಂದ ಕುರೂಪವಾಗಿದ್ದ ಕರುವನ್ನು ಹೊರತೆಗೆಯಲಾಗಿದೆ. ಈ ಸಮಸ್ಯೆಗೆ ಸಿಸ್ಟೋಝೋಮ ರೆಫ್ಲೆಕ್ಸ್ ಎಂದು ಕರೆಯಲಾಗುತ್ತದೆ.

ಈ ತಂಡದಲ್ಲಿ ಪಶು ಆಸ್ಪತ್ರೆ ಸುಳ್ಯದ ಸಂಚಾರಿ ಪಶು ಚಿಕಿತ್ಸಾಲಯ ಪಶು ಸಂಜೀವಿನಿ ಘಟಕದ ವೈದ್ಯರಾದ ಡಾ. ನಾಗರಾಜ್ , ಸಿಬ್ಬಂದಿ ಶ್ರೀವತ್ಸ ವಾಹನ ಚಾಲಕರದ ಪ್ರಜ್ವಲ್ ಬರೆ ಮೇಲು. ಪಶು ಆಸ್ಪತ್ರೆ ಸುಳ್ಯದ ಹಿರಿಯ ಪಶುವೈದ್ಯಾಧಿಕಾರಿ ಡಾ ನಿತಿನ್ ಪ್ರಭು ಮತ್ತು ಡಿ ದರ್ಜೆ ನೌಕರರಾದ ಹರೀಶ ಇದ್ದರು.

ಕರು ಗರ್ಭಕೋಶದ ಒಳಗೆ ಸುಮಾರು ಎರಡು ದಿನಗಳ ಹಿಂದೆಯೇ ಸತ್ತಿರಬಹುದು ಅದರ ಬೆಳವಣಿಗೆ ತೀರ ಅಸಹಜವಾಗಿದ್ದು ಅದರ ಹೊಟ್ಟೆಯ ಭಾಗ ಮುಚ್ಚಿಕೊಳ್ಳದೆ ಅಂಗಾಂಗಗಳೆಲ್ಲ ಗರ್ಭಕೋಶದ ಒಳಗೆ ತೇಲಾಡುತ್ತಾ ಇದ್ದವು ಸ್ವಾಭಾವಿಕವಾಗಿ ಈ ಕರುವಿಗೆ ತಾಯಿ ಜನ್ಮ ನೀಡಲು ಸಾಧ್ಯವಿರಲಿಲ್ಲ ಸುಳ್ಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ತಿಳಿಸಿದ್ದಾರೆ.