ಸುಬ್ರಹ್ಮಣ್ಯ :ನರಸಿಂಹ ಜಯಂತಿ ಅಂಗವಾಗಿ ವಿದ್ವತ್ ಗೋಷ್ಠಿ, ವಯಲಿನ್ ವಾದನ

0

ಸುಬ್ರಹ್ಮಣ್ಯದಲ್ಲಿ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ
ನರಸಿಂಹ ಜಯಂತಿ ಅಂಗವಾಗಿ ಮೇ.21 ರಂದು ಪ್ರಾತಃಕಾಲ ಗಣ ಹೋಮ ಹಾಗೂ ಶ್ರೀ ನರಸಿಂಹ ಹೋಮ ನಡೆಯಿತು.

ಪೂರ್ವಾಹ್ನ‌ ಡಾl ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನರಸಿಂಹ ವಿದ್ವತ್ ಗೋಷ್ಠಿ ನಡೆಯಿತು ಘನ ಅಧ್ಯಕ್ಷತೆ ಮಹಾಮಹೋಪಾಧ್ಯಾಯ ಹರಿದಾಸ ಭಟ್ ವಹಿಸಿದ್ದರು. ವಿದ್ವಾಂಸರುಗಳುಗಳಾದ ಡಾl ರಾಮ ವಿಠಲ ಆಚಾರ್ಯ, ಡಾl ತಿರುಮಲ ಆಚಾರ್ಯ, ಡಾl ಧನಂಜಯ ಆಚಾರ್ಯ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರಳ್ಯ ಆಗಮಿಸಿ ಕಾರ್ಯಕ್ರಮ ದಲ್ಲಿ ಫಾಲ್ಗೊಂಡು ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ವಯಲಿನ್ ವಾದನ ಡಾ ಮೈಸೂರು ಮಂಜುನಾಥ್ ಹಾಗೂ ವಿದ್ವಾನ್ ಸುಮಂತ್ ಮಂಜುನಾಥ್ ಹಾಗೂ ಮೃದಂಗದಲ್ಲಿ ವಿದ್ವಾನ್ ಟ್ರಿಚಿ ಹರಿಕುಮಾರ್,ಚೈನ್ಯೈ , ಘಟಂ ನಲ್ಲಿ ವಿದ್ವಾನ್ ತ್ರಿಪುಣಿತ್ತುರ ರಾಧಾಕೃಷ್ಣನ್ ತಿರುವನಂತಪುರ ರವರಿಂದ ನೆರವೇರಿತು.