ಸಂಪಾಜೆ ಗ್ರಾ.ಪಂ. ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ

0

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯವು ಮೇ.23ರಂದು ನಡೆಯಿತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸದ ತೊಟ್ಟಿ ಸ್ವಚ್ಛತೆ, ರಸ್ತೆಯಲ್ಲಿ ಬಿದ್ದಿರುವ ಮಣ್ಣು, ಗಿಡ ಕೊಂಬೆಗಳ ತೆರವು, ದರ್ಖಾಸ್ ಪೇರಡ್ಕ ರಸ್ತೆಯಲ್ಲಿ ಮುಳುಗು ಸೇತುವೆಯ ಹೂಳು ತೆರವು, ಗ್ರಾಮದ ನೆಲ್ಲಿಕುಮೆರಿ, ಕೈಪಡ್ಕ, ಚರಂಡಿ ನೀರು ನಿಂತ ಪ್ರದೇಶಗಲ್ಲಿ ಚರಂಡಿ ಓಪನ್, ರಸ್ತೆಯಲ್ಲಿ ಇದ್ದ ಮಣ್ಣು ತೆರವು ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳನ್ನು ಮಾಡಲಾಯಿತು.

ಕಳೆದ ಕೆಲವು ದಿನಗಳಿಂದ ಗ್ರಾ‌.ಪಂ. ವ್ಯಾಪ್ತಿಯ ಅಲ್ಲಲ್ಲಿ ಚರಂಡಿ ಬ್ಲಾಕ್ ತೆರವು ಕಾರ್ಯ ನಡೆಯುತ್ತಿದ್ದು ನಾಳೆ ಗ್ರಾಮದ ಸೇತುವೆ ಕೆಳಗಡೆ ಅಡ್ಡವಾಗಿ ನಿಂತ ಮರದ ಪೊದೆ ತೆರವು ಕಾರ್ಯ ನಡೆಯಲಿದ್ದು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.