ನೆಲ್ಲೂರು ಕೆಮ್ರಾಜೆ ; ಹೈದಾರಬಾದ್ ನಲ್ಲಿ‌ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಲಕ್ಷ್ಮಣ ಬೊಳ್ಳಾಜೆ ಯವರಿಗೆ 4 ಬಹುಮಾನ

0

ಹೈದಾರಬಾದ್ ನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ‌ ಬೊಳ್ಳಾಜೆ ಲಕ್ಷ್ಮಣ ಮಣಿಯಾಣಿಯವರು 4 ಸ್ಪರ್ಧೆಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.

100 ಮೀ ಓಟದಲ್ಲಿ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ, 3,500 ಮೀ. ಓಟದಲ್ಲಿ ದ್ವಿತೀಯ, ತ್ರಿಬಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.‌

ಹೈದಾರಬಾದ್ ನ ಇಂಟರ್ ನ್ಯಾಷನಲ್ ಸ್ಟೇಡಿಯಂ ಗಚ್ಚಿಬೌಳಿಯಲ್ಲಿ ಮೇ.22 ಮತ್ತು ಮೇ.23ರಂದು ಈ ಕ್ರೀಡಾಕೂಟ ನಡೆದಿತ್ತು.