ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದ ರಾಜನ್ ದೈವ ಹಾಗೂ ಉಪದೈವಗಳ ಕಾಲಾವಧಿ ಪತ್ತನಾಜೆ ಸಂಪನ್ನ

0

ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ 22 ರಂದು ಕೂಡಿ , ಮೇ 23 ರಂದು ಶಿರಾಡಿ ರಾಜನ್ ದೈವ ಮತ್ತು ಉಪದೈವಗಳ ಕಾಲಾವಧಿ ಪತ್ತನಾಜೆಯು ಹರಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನ ಗೊಂಡಿತು.

ಮೇ 16 ರಂದು ಗೊನೆ ಕಡಿಯುವ ಮೂಹೂರ್ತ ನಡೆಯಿತು. ಮೇ 22 ರಂದು ಸ್ಥಳ ಶುದ್ಧೀಕರಣ ಹಾಗೂ ಸಂಪಾಜೆ ದೇವಜನ ಬಾಲಕೃಷ್ಣ ಅವರ ಚಾವಡಿಯಿಂದ ಭಂಡಾರ ತರಲಾಯಿತು. ಮೇ 23 ರಂದು ಬೆಳಿಗ್ಗೆ 5 ಗಂಟೆಯಿಂದ ಬಿರ್ ಮೆರ್, ಮದಿಮಲ್, ಬಚ್ಚ ನಾಯ್ಕ , ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಆರು ಉಪದೈವಗಳ ನಡಾವಳಿ ನಡೆಯಿತು. ಬಳಿಕ ಶಿರಾಡಿ ಶ್ರೀ ರಾಜನ್ ದೈವ, ಪುರುಷ ದೈವಗಳ ನಡಾವಳಿ ಮತ್ತು ಮಾರಿಕಳ, ಹರಕೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರಾದ ಎಂ. ಬಿ. ಸದಾಶಿವ, ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು, ಉಪಾಧ್ಯಕ್ಷ ನಾರಾಯಣ ಕುಕ್ಕೇಟಿ, ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಸಹ ಕಾರ್ಯದರ್ಶಿ ವಿಜಯ ಕನ್ಯಾನ, ಖಜಾಂಜಿ ಶ್ರೀ ಪಾದ ಹೊಸಮನೆ, ಸಂಘಟನಾ ಕಾರ್ಯದರ್ಶಿ ರಚನ್ ಸುಳ್ಯಕೋಡಿ , ದೈವದ ಪೂಜಾರಿಗಳಾದ ಪ್ರಕಾಶ್ ಕಟ್ಟಕೋಡಿ , ಯಶವಂತ ಅಳಿಕೆ, ರಾಮಯ್ಯ, ನಿಕಟ ಪೂರ್ವ ಪೂಜಾರಿ ಬೆಳ್ಯಪ್ಪ ಹoಡನ ಮನೆ, ದೈವಸ್ಥಾನದ ಮನೆ ತನದವರಾದ ಇಂದಿರಾ ದೇವಿಪ್ರಸಾದ್, ಟೀನಾ ದೇವಿ ಚರಣ್, ಮೌರ್ಯ ಚರಣ್, ಅನ್ನದಾನ ಮೇಲ್ವಿಚಾರಕ ಶ್ರೀಧರ ಪಡ್ಫೂ , ಪುರುಷೋತ್ತಮ ನೂಜೆಲು, ಊರು ಗೌಡ್ರು ದೇವಪ್ಪ ಕುಮಾರಮಂಗಲ, ಮಾಜಿ ನಿಕಟ ಪೂರ್ವ ಅಧ್ಯಕ್ಷ ಕುಮಾರ್ ಚಿದ್ಕಾರ್, ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್ , ಪಂಚಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಕೇಶವ ಚೌಟಾಜೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಮಾಧವ ಕನ್ಯಾನ, ಸೃಜನ್ ಸುಳ್ಯಕೋಡಿ, ಶ್ರಾವಣ್ ಸುಳ್ಯಕೋಡಿ, ಸರ್ವ – ಸದಸ್ಯರು , ದೈವಸ್ಥಾನದ ಮನೆತನದವರು ಹಾಗೂ ಊರ -ಪರವೂರಿನವರು ಹೆಚ್ಛಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾದರು.