ಮುಳ್ಯ ಆನಂದ ಕೋಲ್ಚಾರು ರವರ ಮನೆಗೆ ಭೇಟಿ ನೀಡಿದ ಪುತ್ತಿಲ ಪರಿವಾರ- ಬಾವಿ ದುರಸ್ತಿಯ ಭರವಸೆ

0

ಸುಳ್ಯದ ಪೈಚಾರಿನಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಮುಳ್ಯದ ಆನಂದ ಕೋಲ್ಚಾರು ರವರ ಮನೆಗೆ ಇಂದು ಭೇಟಿ ನೀಡಿದರು.

ಕಳೆದ ಕೆಲ ದಿನಗಳ ಹಿಂದೆ ಆನಂದ ರವರ ಮನೆಯ ಅಂಗಳದಲ್ಲಿದ್ದ ಬಾವಿಯು ಕುಸಿತಗೊಂಡು ಮನೆಗೆ ಹಾನಿ ಸಂಭವಿಸುವ ಸಾಧ್ಯತೆ ಇರುವುದಾಗಿ ಮಾಧ್ಯಮಗಳಲ್ಲಿ ‌ವರದಿ ಪ್ರಕಟವಾಗಿತ್ತು. ಬಾವಿ ಕುಸಿತದಿಂದ ಮನೆಯು ಕುಸಿತವಾಗಬಹುದೆಂಬ ಭಯದಿಂದ ಅವರು ಕುಟುಂಬ ಸಮೇತ ಮನೆ ಖಾಲಿ ಮಾಡಿ ಸಂಬಂಧಿಕರ ಮನೆಯಲ್ಲಿ ದ್ದಾರೆ. ಈ ಬಗ್ಗೆ ವಿಷಯ ತಿಳಿದ ಪುತ್ತಿಲ ಪರಿವಾರದವರು ಬಂದು‌ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಿ ಕೊಡುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.