ಒಂದು ದಿನದ ಶೋಕಿಗೆ ಆಗದಿರಲಿ ಪರಿಸರ ದಿನ

0

ಇಂದು ವಿಶ್ವ ಪರಿಸರ ದಿನ ಜೂನ್ 5ರಂದು ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ದಿನವನ್ನು ಆಚರಣೆ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಪರಿಸರ ದಿನವನ್ನು ಆಚರಿಸಿ ಗಿಡ ನೆಡುವುದು ಇದನ್ನೆಲ್ಲ ಕಂಡಿದ್ದೇವೆ.

ಆದರೆ ವರ್ಷ ಪೂರ್ತಿ ಗಿಡ ಮರಗಳ ಬೆಳೆಸಿ ಉಳಿಸಿ ಅದು ನಮಗೂ ಆಸರೆ ನೀಡುತ್ತದೆ. ಬಿಸಿಲನ್ನು ತಡೆದು ನೆರಳನ್ನು ನೀಡುತ್ತದೆ. ನಮಗೆ ಪರಿಸರದಲ್ಲಿ ಜೀವಿಸಲು ಅಗತ್ಯವಾದ ಶುದ್ಧ ಗಾಳಿ ಮರಗಳಿಂದ ದೊರೆಯುತ್ತದೆ ಎಂಬುದು ನಮಗೆ ತಿಳಿದ ವಿಷಯ.


ಪಕ್ಷಿಗಳಿಗೆ ಗೂಡು ಕಟ್ಟಿ ಜೀವಿಸಲು ಮರ ಗಿಡಗಳೇ ಆಶ್ರಯ ನೀಡುತ್ತದೆ. ಹಾಗೆ ಪರಿಸರ ಸಂರಕ್ಷಣೆ ಅತ್ಯವಶ್ಯಕ. ಪರಿಸರ ವೀಕ್ಷಣೆಯು ಬಹಳ ಸುಂದರ. ಮಾನವನ ದುರಾಸೆಯಿಂದ ಕಾಡು ನಾಶ ಮಾಡಿ ಮನೆ ಇನ್ನಿತರ ಪೀಠೋಪಕರಣ ತಯಾರಿಸಿ ಮರ ಗಿಡಗಳ ಸಂತತಿ ನಾಶವಾಗುತ್ತಿದೆ. ಮರ ಗಿಡಗಳ ನಾಶದಿಂದ ಅನೇಕ ವನ್ಯ ಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಳೆಯು ಸರಿಯಾಗಿ ಬರುವುದಿಲ್ಲ. ಕಾಡಿನ ನಾಶದಿಂದ ಪ್ರಾಣಿ ಪಕ್ಷಿಗಳ ಸಂತತಿ ನಶಿಸಿ ಹೋಗುತ್ತಿವೆ. ಹೀಗೆಯೇ ಯುವ ಪೀಳಿಗೆಯು ಇನ್ನೂ ಅದೇ ರೀತಿ ಮುಂದುವರಿಯಬಾರದೆಂಬ ದೃಷ್ಟಿಯಿಂದ ಒಳ್ಳೆಯ ಹಬ್ಬದ ದಿನದಂದು ಪ್ರತಿಯೊಂದು ಮನೆಯಲ್ಲಿ ಒಂದೊಂದು ಗಿಡ ನೆಡುವುದರ ಮೂಲಕ ಪರಿಸರದ ರಕ್ಷಣೆ ಮಾಡುವುದು ಉತ್ತಮ. ಹಾಗೆ ಯಾವುದೇ ಸಭೆ ಸಮಾರಂಭಗಳಲ್ಲಿ ಇನಾಮು ರೂಪದಲ್ಲಿ ಗಿಡಗಳನ್ನು ಕೊಡುವುದರ ಮೂಲಕ ಮರ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಮಕ್ಕಳ ಮೂಲಕ ಆ ಸಸಿಗಳ ಪಾಲನೆ ಪೋಷಣೆ ಮಾಡಿದಾಗ ಅದರ ಸಂತಸ ಹೇಳಲಾಗದು. ಮಕ್ಕಳ ಮೂಲಕ ಎಲ್ಲೆಡೆ ‌ಮರ ಗಿಡಗಳ ಉಳಿವಿಗಾಗಿ ಹೋರಾಟ ನಡೆಯಬೇಕು. ಮನೆ ಮನ ಮುಟ್ಟುವಂತೆ ಮಾಹಿತಿ ನೀಡಬೇಕು.


ಹಚ್ಚ ಹಸುರಿನ ಪರಿಸರ ನಿರ್ಮಾಣವಾಗಬೆಕು.  ಮನೆಗೊಂದು ಮಗುವಿನಂತೆ ಊರಿಗೊಂದು ವನ ನಿರ್ಮಾಣ ಆಗಬೇಕು. 

  ✍ಹರ್ಷಿತಾ ಹರೀಶ್ ಕುಲಾಲ್