ಸತತ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆ

0

ಜಾಲ್ಸೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

18ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಜೂ.9ರಂದು ರಾತ್ರಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಾಲ್ಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು.

ಜಾಲ್ಸೂರಿನ ಬೆನಕ ಬೇಕರಿ ಮುಂಭಾಗದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಅಂಗಡಿ – ಅಂಗಡಿಗಳಿಗೆ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು. ಜಾಲ್ಸೂರು ಬೆನಕ ಬೇಕರಿ ಮಾಲಕ ಎಂ. ಸುಂದರೇಶ್ ಭಟ್ ಅವರು ತಂಪು ಪಾನಿಯವನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಜಯರಾಮ ರೈ ಜಾಲ್ಸೂರು, ಮಾದವ ಗೌಡ ಕಾಳಮನೆ, ದಿನೇಶ್ ಅಡ್ಕಾರು, ಎಂ.ಎನ್. ಸತೀಶ್ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಎಸ್. ತಿಮ್ಮಯ್ಯ ಆಚಾರ್ಯ ಜಾಲ್ಸೂರು, ಕೆ.ಎಂ‌. ಬಾಬು ಕದಿಕಡ್ಕ, ದಿನೇಶ್ ಅಡ್ಕಾರು, ರಜತ್ ಅಡ್ಕಾರು, ವಿವೇಕ್ ರೈ ಡಿಂಬ್ರಿಗುತ್ತು, ಉಮನಾಥ ಗೌಡ ಪಟೇಲ್ ಮನೆ ಜಾಲ್ಸೂರು, ಧನುರಾಜ್ ಕದಿಕಡ್ಕ, ರಾಮಚಂದ್ರ ಗೌಡ ಕಜೆಗದ್ದೆ, ಗಣೇಶ್ ರೈ ಕುರಿಯ, ಹೇಮಚಂದ್ರ ಕದಿಕಡ್ಕ, ಶ್ರೀಮತಿ ಭಾರತಿ ಕಜೆಗದ್ದೆ, ಶ್ರೀಮತಿ ಬೇಬಿ ಶೇಸನಡ್ಕ, ಗಣೇಶ್ ಶೇಸನಡ್ಕ, ದಿವಾಕರ ರೈ ಕುರಿಯ, ಯಜ್ಞೇಶ್ ಜಾಲ್ಸೂರು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.