ಕಲ್ಮಡ್ಕ : ಬಾ.ಜ. ಪಾ. ಕಾರ್ಯಕರ್ತರ ಅಭಿನಂದನಾ ಸಭೆ

0

ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಬಿ.ಜೆ.ಪಿ ಯ ವಿಜಯಕ್ಕೆ ಕಾರಣೀಕರ್ತರಾದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು, ಶ್ರೀ ರಾಮ ಮಂದಿರ ಕಲ್ಮಡ್ಕದಲ್ಲಿ ಜೂ.9 ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನ ಹಮ್ಮಿಕೊಳ್ಳಲಾಯಿತು.

ಮುಂದಿನ ಐದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡುವಂತಾಗಲಿ, ಎಂಬ ಆಶಯದೊಂದಿಗೆ ಮೋದಿಜೀ ಪ್ರಮಾಣ ವಚನ ಸ್ವೀಕಾರಿಸುವ ಸಮಯಕ್ಕೆ ಸರಿಯಾಗಿ ಭಜನಾ ಕಾರ್ಯಕ್ರಮ ನಡೆಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಮಂದಿರದ. ಪೂರ್ವಾಧ್ಯಕ್ಷ ಗೋವಿಂದಯ್ಯ.ಜೆ. ಸಾಕೇತ್ ಅಭಿನಂದನಾ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಾ.ಜ.ಪಾ. ಸುಳ್ಯ ಮಂಡಲದ ಉಪಾಧ್ಯಕ್ಷ ಆರ್.ಕೆ.ಭಟ್. ಹಾಗೂ ಹಿರಿಯ ಕಾರ್ಯಕರ್ತರಾದ ಶಿವರಾಮ. ಭಟ್. ಬಿ.ಕೆ. ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಬಾ.ಜ.ಪಾ ದ ಸ್ಥಾನೀಯ ಸಮಿತಿಯ ಸಂಚಾಲಕರಾದ ರಮೇಶ್ ತಿಪ್ಪನಕಜೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯಕರ್ತ ಶ್ರೀ ವೆಂಕಟ್ರಮಣ ಆಚಾರ್ಯ ಪ್ರಾರ್ಥಿಸಿದರು. ಸ್ಥಾನೀಯ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಸ್ವಾಗತಿಸಿ, ಶ್ರೀ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಜೋಗಿ ಬೆಟ್ಟು ವಂದಿಸಿದರು.ಸ್ಥಾನೀಯ ಸಮಿತಿಯ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.