ಏನೆಕಲ್ : ಬಾನಡ್ಕ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ

0

ಏನೆಕಲ್ ಬಾನಡ್ಕ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾನಡ್ಕ ದಲ್ಲಿ ಜೂನ್ 10ರಂದು ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.

ಗ್ರಾ ಪಂ ಸದಸ್ಯರಾದ ಶಿವರಾಮ ನೆಕ್ರಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪೋಷಕರ ಸಹಾಯದಿಂದ ನಿರ್ಮಾಣಗೊಂಡ ನೂತನ ಸಿದ್ಧಿಕ ಭೋಜನ ಶಾಲಾ ಕೊಠಡಿಯನ್ನು ತಾಲೂಕು ಕ್ಷೇತ್ರ ಶಿಕ್ಸಣಾಧಿಕಾರಿ ರಮೇಶ್ ಉದ್ಘಾಟಿಸಿದರು.


ಹಿರಿಯ ವಿದ್ಯಾರ್ಥಿ ನಿವೃತ್ತ ಸೈನಿಕ ಸುಬೇದಾರ್ ಹೊನ್ನಪ್ಪ ಗೌಡ ಕಟ್ಟ ಶಾಲೆಗೆ ಕೊಡುಗೆಯಾಗಿ ನೀಡಿದ ಕಪಾಟನ್ನು ಹಸ್ತಾoತರಿಸಲಾಯಿತು.


ಶ್ರೀಮತಿ ಕವಿತಾ ಲೋಕೇಶ್ ಮತ್ತು ಮಕ್ಕಳು ನೀಡಿದ ಕಂಪಾಸ್ ಬಾಕ್ಸನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಹಿರಿಯ ವಿದ್ಯಾರ್ಥಿ ಉದಯಕುಮಾರ್ ಬಾನಡ್ಕರವರ ಸಹಕಾರದಿಂದ ಬರವಣಿಗೆ ಪುಸ್ತಕವನ್ನು ವಿತರಿಸಲಾಯಿತು.

ಪ್ರತಿವರ್ಷದಂತೆ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಗೆ ಹೊಸದಾಗಿ ಸೇರಿದ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಕೊಡೆ , ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


ಇತ್ತೀಚಿನ ದಿನಗಳಲ್ಲಿ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯನ್ನು ಗಮನಿಸಿದ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಕನಿಷ್ಠ ಮೊತ್ತ ರೂ 1,00,000 ಸಂಗ್ರಹದ ಗುರಿಯೊಂದಿಗೆ ಎಲ್ಲಾ ಹಿರಿಯ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಮಾಡಿ ಒಂದು ಅಜೀವ ಸದಸ್ಯತನವನ್ನು ಮಾಡುವ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದರು.

ಮುಂದಿನ ವರ್ಷದಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಸಲುವಾಗಿ ಪ್ರಾರಂಭಿಕವಾಗಿ ಸಂಗ್ರಹವಾದ ಹಿರಿಯ ವಿದ್ಯಾರ್ಥಿಗಳ ಅಜೀವ ಸದಸ್ಯತನದ ಮೊತ್ತ ರೂ 25000 ನ್ನು ಸ್ಥಳೀಯ ಸಹಕಾರಿ ಬ್ಯಾಂಕಲ್ಲಿ ನಿರಖು ಠೇವಣಿ ಇರಿಸಿದ ಪ್ರಮಾಣಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯರ್ ಹಸ್ತಾoತರಿಸಿದರು.

ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀಮತಿ ಜಾನಕಿ ಕೆ ಪ್ರಸ್ತಾವಿಕ ಮಾತನಾಡಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ ಶೀತಲ್ ಯು. ಕೆ. ಮತ್ತು ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತ ಉಪಸ್ಥಿತರಿದ್ದರು .

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಬಾಲಾಡಿ , ಗ್ರಾ ಪಂ ಸದಸ್ಯರಾದ ಶ್ರೀಮತಿ ಪುಷ್ಪಲತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಯರ್ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ವಾಸುದೇವ ಗೌಡ ಬಾನಡ್ಕ, ನಿವೃತ್ತ ಸುಬೆದಾರ್ ಹೊನ್ನಪ್ಪ ಗೌಡ ಕಟ್ಟ , ಭಾಸ್ಕರ ಗೌಡ ಕೆ ಎಂ , ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಮುನಾ ಹಾಗೂ ಅಂಗನವಾಡಿ ಪುಟಾಣಿಗಳು , ಶಾಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಶಾಲಾ ಸಹಶಿಕ್ಷಕಿ ಶ್ರೀಮತಿ ಗೀತಾ ಸ್ವಾಗತಿಸಿದರು ಹಾಗೂ
ಕು. ಸ್ಮಿತಾ ವಂದಿಸಿದರು.