ಕಲ್ಲೋಣಿ – ದೇವರಕಾನ ರಸ್ತೆಯಲ್ಲಿ ಹರಿಯುವ ಮಳೆ ನೀರು – ರಸ್ತೆಯ ತಡೆಗೋಡೆ ಅಪಾಯದಲ್ಲಿ

0

ನಾಗರಿಕರಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ಮನವಿ

ಬೆಳ್ಳಾರೆ ಗ್ರಾಮದ ಕಲ್ಲೋಣಿಯಿಂದ ದೇವರಕಾನ ರಸ್ತೆಯಲ್ಲಿ ರಸ್ತೆ ಬದಿ ಚರಂಡಿ ಮುಚ್ಚಿದ್ದು ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ರಸ್ತೆ ಬದಿ ಇರುವ ತಡೆಗೋಡೆಗೆ ನೀರು ಹರಿಯುತ್ತಿದ್ದು ತಡೆಗೋಡೆ ಬೀಳುವ ಹಂತದಲ್ಲಿದೆ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಗ್ರಾಮ ಪಂಚಾಯತ್ ಗೆ ಮನವಿ ನೀಡಿದ್ದಾರೆ.