ಸುಳ್ಯ : ಬಿಗ್ 4 ಟೈಲ್ಸ್ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಕೊಡೆ ವಿತರಣೆ

0

ಸಂಸ್ಥೆಯ ಈ ಕಾರ್ಯಕ್ರಮ ಶ್ಲಾಘನೀಯ : ನ. ಪಂ ಮುಖ್ಯಾಧಿಕಾರಿ ಸುಧಾಕರ್

ಸುಳ್ಯ:ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಸಮೀಪ ಕಳೆದ ಹಲವಾರು ವರ್ಷಗಳಿಂದ ಕಾರ್ಯಚರಿಸಿಕೊಂಡು ಬರುತ್ತಿರುವ ಇಬ್ರಾಹಿಂ ಕಡಿಕ್ಕಡ್ಕರವರ ಮಾಲಕತ್ವದ ಬಿಗ್ ಫೋರ್ ಟೈಲ್ಸ್ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬೇಗ್, ಕೊಡೆ ವಿತರಣಾ ಕಾರ್ಯಕ್ರಮ ಜೂ.10 ರಂದು ನಡೆಯಿತು.


ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.ಸುಳ್ಯ ಪೊಲೀಸ್ ಠಾಣಾ ಎ ಎಸ್ ಐ ಗಂಗಾಧರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಶಿವಾನಂದ್ ಹಾಗೂ ಸ್ಥಳೀಯ ಉದ್ಯಮಿ ಶಾಫಿ ಮೊದಲಾದವರು ಉಪಸ್ಥಿತರಿದ್ದರು.


ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಸ್ಥೆಯ ಸಿಬ್ಬಂದಿಗಳಾದ ಅಝೀಝ್,ವೇದಾವತಿ, ರಾಜೇಶ್,ನಿಶ್ಮಿತಾ, ಇರ್ಫಾನ್, ಧನುಷ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.