ದೊಡ್ಡಡ್ಕ: ಚಲಿಸುತ್ತಿದ್ದ ರಿಕ್ಷಾದ ಹಿಂಬದಿಗೆ ಕಾರು ಢಿಕ್ಕಿ : ಜಖಂ

0

ಚಲಿಸುತ್ತಿದ್ದ ರಿಕ್ಷಾದ ಹಿಂಬದಿಗೆ ಕಾರು ಡಿಕ್ಕಿಯಾಗಿ ರಿಕ್ಷಾ ಚರಂಡಿಗೆಚರಂಡಿಗೆ ಉರುಳಿ ಜಖಂಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ದೊಡ್ಡಡ್ಕದಲ್ಲಿ ಜೂ.12ರಂದು ಬೆಳಿಗ್ಗೆ ಸಂಭವಿಸಿದೆ.

ಚೆಂಬು ಗ್ರಾಮದ ಊರುಪಂಜ ನಿವಾಸಿ ರದೀಶ್ ಅವರು ತಮ್ಮ ಅಟೋರಿಕ್ಷಾದಲ್ಲಿ ಸಂಪಾಜೆ ಮಾರ್ಗವಾಗಿ ಗೂನಡ್ಕಕ್ಕೆ ಬರುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಕಾರು ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಅಟೋರಿಕ್ಷಾ ಸಮೀಪದ ಚರಂಡಿಗೆ ಉರುಳಿದ್ದು, ಜಖಂಗೊಂಡಿರುವುದಾಗಿ ತಿಳಿದುಬಂದಿದೆ.