ತರಗತಿಯಲ್ಲಿ ಪೆಟ್ಟು ಕೊಟ್ಟ ಶಿಕ್ಷಕಿಯ ಮೇಲೆ ಪೋಲೀಸ್ ದೂರು

0

ತರಗತಿಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಹೊಡೆದರೆಂದು ವಿದ್ಯಾರ್ಥಿನಿಯ ಮನೆಯವರು ಪೋಲೀಸರಿಗೆ ದೂರು ನೀಡಿರುವ ಘಟನೆ ಮರ್ಕಂಜದಿಂದ ವರದಿಯಾಗಿದೆ.

ಜೂನ್ 13 ರಂದು ಮುಡ್ನೂರು ಮರ್ಕಂಜ ಶಾಲೆಯಲ್ಲಿ ಶಿಕ್ಷಕಿ ಅಶ್ವಿನಿ ಎಂಬವರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹೊಡೆದಿದ್ದರೆನ್ನಲಾಗಿದೆ. ಪರಿಣಾಮವಾಗಿ ಹೇಮಕುಮಾರ ಜೋಗಿಮೂಲೆ ಎಂಬವರ ಪುತ್ರಿ 6ನೇ ತರಗತಿಯ ವಿದ್ಯಾರ್ಥಿನಿ ಸಾತ್ವಿ ಎಂಬಾಕೆಯ ಅಂಗೈಯಲ್ಲಿ ಕಪ್ಪುಕಲೆಯಾಗಿರುವುದನ್ನು ಕಂಡು ಹೇಮಕುಮಾರ್ ರವರು ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಲ್ಲದೆ, ಶಿಕ್ಷಕಿ ಅಶ್ವಿನಿಯವರ ಮೇಲೆ ಪೋಲೀಸ್ ದೂರು ನೀಡಿದ್ದಾರೆ. ಪೋಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.