ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ,ಸದಸ್ಯರಾಗಿ ಸೋಮನಾಥ ಪೂಜಾರಿ, ಗಂಗರತ್ನ ಪೆರಾಭೆ

0

ಬಿಜೆಪಿ ಜಿಲ್ಲಾ
ಹಿಂದುಳಿದ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಹಾಗೂ ಸದಸ್ಯರಾಗಿ ಸೋಮನಾಥ ಪೂಜಾರಿ ಮತ್ತು ಗಂಗರತ್ನ ಪೆರಾಭೆ ಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ನೇಮಕ ಮಾಡಿದ್ದಾರೆ.
ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಪನ್ನೆ ಯವರು ಬೆಳ್ಳಾರೆ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು.ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಸದಸ್ಯರಾದ ಸೋಮನಾಥ ಪೂಜಾರಿ ಯವರು ಪ್ರಸ್ತುತ ಸುಳ್ಯಪಿ.ಎಲ್.ಡಿ.ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ.