ಬೊಳ್ಳಾಜೆ ಶಾಲಾ ವಿದ್ಯಾವರ್ಧಕ ಸಂಘದ ಮಾಜಿ ನಿರ್ದೇಶಕ, ನೆಲ್ಲೂರು ಕೆಮ್ರಾಜೆ ಸೊಸೈಟಿ ಮಾಜಿ ನಿರ್ದೇಶಕ ರಾಧಾಕೃಷ್ಣ ನಾಯಕ್ ಬೊಳ್ಳಾಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ರಾಧಾಕೃಷ್ಣ ನಾಯಕ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ಪ್ರಾಯವಾಗಿತ್ತು.

ರಾಧಾಕೃಷ್ಣ ನಾಯಕ್ ರವರು ಕೃಷಿಕರಾಗಿದ್ದರು. ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಸಹಕಾರಿ ಸಂಘ ಉಬರಡ್ಕ ಮಿತ್ತೂರು ಪ್ರಾಥಮಿಕ ಸಹಕಾರಿ ಸಂಘದೊಂದಿಗೆ ಇದ್ದಾಗ ಸೊಸೈಟಿ ನಿರ್ದೇಶಕರಾಗಿದ್ದರು. ಬೊಳ್ಳಾಜೆ ಶಾಲಾ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪುತ್ರರಾದ ಶ್ಯಾಮಸುಂದರ, ಯಾದವ, ಮನೋಹರ ಹಾಗೂ ಪುತ್ರಿಯರಾದ ಶ್ರೀಮತಿ ಅನುಸೂಯ ಮಾಪಲಕಜೆ, ಶ್ರೀಮತಿ ಶಕುಂತಳ ಮಂಚಿ, ಶ್ರೀಮತಿ ಸರಸ್ವತಿ ಪುತ್ತೂರು, ಶ್ರೀಮತಿ ಸಾವಿತ್ರಿ ಕಂಞಪಾಡಿ ಹಾಗೂ ಸೊಸೆಯಂದರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ.