ಪಂಬೆತ್ತಾಡಿ : ಶಾಲಾ ಮಂತ್ರಿ ಮಂಡಲ ರಚನೆ

0

ಪಂಬೆತ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-25 ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮಾಡುವ ಮೂಲಕ ರಚಿಸಲಾಯಿತು.

ಮುಖ್ಯ ಮಂತ್ರಿಯಾಗಿ ಧಕ್ಷಾ.ಎಂ , ಉಪಮುಖ್ಯಮಂತ್ರಿಯಾಗಿ ಚಿಂತನ್, ಗೃಹ ಮಂತ್ರಿ ಮತ್ತು ಸ್ವಚ್ಚತಾ ಮಂತ್ರಿಯಾಗಿ ಪೃಥ್ವಿ ರಾಜ್ .ಎಂ, ಉಪ ಸ್ವಚ್ಚತಾ ಮಂತ್ರಿಯಾಗಿ ವರ್ಷಿಣಿ, ಶಿಕ್ಷಣ ಮಂತ್ರಿಯಾಗಿ ಹಂಸಿನಿ, ಉಪ ಶಿಕ್ಷಣ ಮಂತ್ರಿಯಾಗಿ ನಿರೀಕ್ಷಾ, ಸಾಂಸ್ಕೃತಿಕ ಮಂತ್ರಿಯಾಗಿ ಶೃತಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಜಾನ್ವಿ, ಆರೋಗ್ಯ ಮಂತ್ರಿಯಾಗಿ ಪ್ರಣಯ್, ಉಪ ಆರೋಗ್ಯ ಮಂತ್ರಿಯಾಗಿ ಮೋಹನ್ ಕುಮಾರ್, ಆಹಾರ ಮಂತ್ರಿಯಾಗಿ ರಶ್ಮಿತ್, ಉಪ ಆಹಾರ ಮಂತ್ರಿಯಾಗಿ ಆತ್ಮಿ , ಕ್ರೀಡಾ ಮಂತ್ರಿಯಾಗಿ ಮೋಕ್ಷಿತ್ ,ಉಪ ಕ್ರೀಡಾ ಮಂತ್ರಿಯಾಗಿ ಗ್ರೀಷ್ಮ, ಕೃಷಿ ಮಂತ್ರಿಯಾಗಿ ನಿಶಿಕ್, ಉಪ ಕೃಷಿ ಮಂತ್ರಿಯಾಗಿ ಅನ್ವಿತಾ. ನೀರಾವರಿ ಮಂತ್ರಿಯಾಗಿ ಕೌಶಿಕ್, ಉಪ ನೀರಾವರಿ ಮಂತ್ರಿಯಾಗಿ ಹಂಸಿನಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಕೌಶಿಕ್.ಕೆ ಆಯ್ಕೆಯಾದರು.


ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಭಾರ್ಗವಿ, ಸಹಶಿಕ್ಷಕಿ ಭವ್ಯ. ಬಿ ಹಾಗೂ ಅತಿಥಿ ಶಿಕ್ಷಕಿ ಮಮತಾ , ಗೌರವ ಶಿಕ್ಷಕಿ ದಯಾಮಣಿ ಚುನಾವಣಾ ಕಾರ್ಯದಲ್ಲಿ ಸಹಕರಿಸಿದರು.